ವರದಿ -ಗೀತಾಂಜಲಿ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು KCET 2022 ಪರೀಕ್ಷೆಗಳ ಫಲಿತಾಂಶಗಳನ್ನು ಇಂದು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ.
ಕೆಸಿಇಟಿ 2022ರ ಫಲಿತಾಂಶಗಳನ್ನು ಅಧಿಕೃತ ವೆಬ್ಸೈಟ್ kea.kar.nic.in ಅಥವಾ cetonline.karnataka.gov.inನಲ್ಲಿ ವೀಕ್ಷಿಸಬಹುದು. ಫಲಿತಾಂಶದ ಜೊತೆಗೆ ಮೆರಿಟ್ ಪಟ್ಟಿ ಕೂಡ ಪ್ರಕಟವಾಗಲಿದೆ. ಇಂದು ಮಧ್ಯಾಹ್ನದ ವೇಳೆಗೆ ಕೆಸಿಇಟಿ ಫಲಿತಾಂಶ ಪ್ರಕಟವಾಗುವಾಗಲಿದೆ.
ಈ ಮೊದಲು ಸಿಇಟಿ ಫಲಿತಾಂಶವನ್ನು ಜುಲೈ 17ರಂದೇ ಪ್ರಕಟಿಸುವುದಾಗಿ ಪರೀಕ್ಷಾ ಪ್ರಾಧಿಕಾರ ಘೋಷಿಸಿತ್ತು. ಆದರೆ ಸಿಬಿಎಸ್ಇ ಮತ್ತು ಐಸಿಎಸ್ಇ ಪಠ್ಯಕ್ರಮಗಳಲ್ಲಿ ಪರೀಕ್ಷೆ ಬರೆದಿದ್ದ 12ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುವುದು ತಡವಾದ ಹಿನ್ನೆಲೆಯಲ್ಲಿ ಸಿಇಟಿ ಫಲಿತಾಂಶ ಪ್ರಕಟಣೆಯೂ ತಡವಾಯಿತು.
PublicNext
30/07/2022 07:21 am