ಆನೇಕಲ್: ತಾಲ್ಲೂಕಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಶಿಕ್ಷಣ ಪ್ರೋತ್ಸಾಹಕ್ಕಾಗಿ ನೋಟ್ ಬುಕ್ ವಿತರಣೆ ಮಾಡಲಾಯಿತು. ಇನ್ನು ಇದೇ ವೇಳೆ ಆನೇಕಲ್ ತಾಲ್ಲೂಕಿನ ಸಿಆರ್ ಪಿ ರಾಘವೇಂದ್ರ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳು ಅತಿ ಹೆಚ್ಚು ಅಂಕಗಳಿಸುವ ಮೂಲಕ ಶಾಲೆಗೆ ಮತ್ತು ಸಂಕ್ರಮಣ ಬಳಗದಂತಹ ಸಂಘ ಸಂಸ್ಥೆಗಳಿಗೆ ಗೌರವ ತರಬೇಕು ಎಂದು ತಿಳಿಸಿದರು.ಶಿಕ್ಷಣ ಇಲಾಖೆ, ಸಂಘ ಸಂಸ್ಥೆಗಳ ಜೊತೆಗೂಡಿ ಸಾಕಷ್ಟು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೆಲ್ಲವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕವಾಗಿ ಮುನ್ನೆಲೆಗೆ ಬರಬೇಕೆಂದು ಅವರು ಆಶಿಸಿದರು.
ಶಾಲೆ ಮುಖ್ಯೋಪಾಧ್ಯಾಯ ಸರೋಜ ಮೇಡಂ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳು ಯಾರಿಗೂ ಕಡಿಮೆ ಇಲ್ಲ. ಕಳೆದ ಬಾರಿಯ ವಿದ್ಯಾರ್ಥಿಗಳು 625 ಕ್ಕೆ 617 ಅಂಕ ಪಡೆದಿದ್ದಿದ್ದಾರೆ. ನೀವು ಕೂಡ ಚೆನ್ನಾಗಿ ಓದಿ ಒಳ್ಳೆಯ ಅಂಕ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ವಕೀಲರಾದ ಗೀತಭಗವತಿ ಮಾತನಾಡಿ, ದೇಶವನ್ನು ಕಟ್ಟಿ ಬೆಳೆಸಿದ ಮಹಾನ್ ಸಾಧಕರೆಲ್ಲರೂ ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಿರುವುದು. ಹೀಗಾಗಿ ಸರಕಾರಿ ಶಾಲೆಯೆಂಬ ಕೀಳರಮೆ ಯಾರಿಗೂ ಬೇಡವೆಂದು ತಿಳಿಸಿದರು.
ವಕೀಲ ಪುರುಷೋತ್ತಮ್ ಮಾತನಾಡಿ, ಈ ಸರಕಾರಿ ಶಾಲೆಯಲ್ಲಿ ಓದಿರುವ ಬಹುತೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ಕಳೆದ ಬಾರಿ ವಿದ್ಯಾರ್ಥಿನಿಯರಾದ ನಳಿನಿ, ಅನುಶ್ರಿ, ಲಾವಣ್ಯ, ಬಿಂದು ತಾಲ್ಲೂಕಿಗೆ ಹೆಸರು ತಂದು ಕೊಟ್ಟಿದ್ದಾರೆ. ನೀವು ಕೂಡ ಈ ಬಾರಿ ಶಾಲೆಗೆ ಗೌರವ ತರಬೇಕೆಂದು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಆನೇಕಲ್ ವಕೀಲರಾದ ರೂಪ ಎಂ, ವನೀತಾ, ಚಂದ್ರಕಲಾ, ಶಿಕ್ಷಕರಾದ ಗಿರಿಜಾ,ವಕೀಲ ಅಶೋಕ್ ಮತ್ತಿತರರಿದ್ದರು.
Kshetra Samachara
22/07/2022 05:38 pm