ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಗೆ ಈ ಬಾರಿ ಸೈಕಲ್, ಶೂ, ಸಾಕ್ಸ್ ವಿತರಣೆ ಮಾಡುವ ಯೋಜನೆಗೆ ಸರ್ಕಾರ ಎಳ್ಳು ನೀರು ಬಿಟ್ಟಿದೆ. ಈ ಬಾರಿ ಬಜೆಟ್‌ನಲ್ಲಿ ಅನುದಾನ ಮೀಸಲಿಡದ ಕಾರಣ ಈ ಯೋಜನೆಯನ್ನ ಕೈಬಿಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. 8 ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್, 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆಗೆ ಬ್ರೇಕ್ ಹಾಕಲು ಚಿಂತನೆ ನಡೆಸಲಾಗ್ತಿದೆ.
2019-20 ನೇ ಸಾಲಿನಿಂದಲೇ ಸೈಕಲ್ ವಿತರಣೆ ನಿಲ್ಲಿಸಲಾಗಿತ್ತು, ಅಲ್ಲದೇ ಕಳೆದ ಎರಡು ಶೈಕ್ಷಣಿಕ ವರ್ಷದಿಂದ ಶೂ, ಸಾಕ್ಸ್ ಕೂಡ ವಿತರಣೆ ಮಾಡಿರಲಿಲ್ಲ. ಸದ್ಯ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸುಮಾರು 50 ಲಕ್ಷ ಮಕ್ಕಳು ಶೂ, ಸಾಕ್ಸ್‌ನಿಂದ ವಂಚಿತರಾದ್ರೆ 8 ನೇ ತರಗತಿಯಲ್ಲಿ ಓದುತ್ತಿರುವ ಸುಮಾರು 6.15 ಲಕ್ಷ ಮಕ್ಕಳಿಗೆ ಸೈಕಲ್ ಭಾಗ್ಯ ಇಲ್ಲದಂತಾಗಿದೆ. ಶೂ, ಸಾಕ್ಸ್ ವಿತರಣೆಗೆ ಪ್ರತಿವರ್ಷ 140 ಕೋಟಿ ವೆಚ್ಚ ಮಾಡಲಾಗ್ತಿತ್ತು, ಇದಕ್ಕಾಗಿ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಅನುದಾನ ಮೀಸಲಿಡಲಾಗ್ತಿತ್ತು. ಆದ್ರೆ ಈ ಬಾರಿ ಹಣ ನಿಗದಿ ಮಾಡದೇ ಇರೋದರಿಂದ ಸೈಕಲ್, ಶೂ, ಸಾಕ್ಸ್ ನೀಡುವ ಯೋಜನೆ ಕೈ ಬಿಡಲು ನಿರ್ಧರಿಸಿಲಾಗಿದೆ.
PublicNext
15/07/2022 02:27 pm