ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 143 ವಿದ್ಯಾರ್ಥಿಗಳಿಗೆ 35,000 ರೂ. ಪ್ರೋತ್ಸಾಹ ಧನ ವಿತರಣೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿದ್ಯಾ ಇಲಾಖೆಯಲ್ಲಿ ಒಟ್ಟು 15 ಪದವಿ ಪೂರ್ವ ಕಾಲೇಜುಗಳಿದ್ದು, 2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 2,167 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 1,396 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 64.42 ರಷ್ಟು ಫಲಿತಾಂಶ ಬಂದಿದೆ.

ಅದರಂತೆ, ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 2,167 ವಿದ್ಯಾರ್ಥಿಗಳ ಪೈಕಿ 143 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಬಿಬಿಎಂಪಿ ಪಾದರಾಯನಪುರ ಪದವಿ ಪೂರ್ವ ಕಾಲೇಜು ಶೇ 90ರಷ್ಟು ಫಲಿತಾಂಶವನ್ನು ನೀಡಿ ಮೊದಲ ಸ್ಥಾನ, ಬಿಬಿಎಂಪಿ ಪದವಿ ಪೂರ್ವ ಕಾಲೇಜು ಭೈರವೇಶ್ವರ ನಗರ ಶೇ. 83.92 ರಷ್ಟು ಫಲಿತಾಂಶವನ್ನು ನೀಡಿ ಎರಡನೇ ಸ್ಥಾನ, ಬಿಬಿಎಂಪಿ ಪದವಿ ಪೂರ್ವ ಕಾಲೇಜು ಜೋಗುಪಾಳ್ಯ ಶೇ. 76.00 ರಷ್ಟು ಫಲಿತಾಂಶವನ್ನು ನೀಡಿ ಮೂರನೇ ಸ್ಥಾನವನ್ನು ಪಡೆದಿರುತ್ತದೆ. ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 143 ವಿದ್ಯಾರ್ಥಿಗಳಿಗೂ ಪಾಲಿಕೆ ವತಿಯಿಂದ ತಲಾ 35,000 ರೂ. ಗಳ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತದೆ ಎಂದು ಪಾಲಿಕೆಯ ವಿದ್ಯಾ ಇಲಾಖೆಯು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

ಬಿಬಿಎಂಪಿಯ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

20/06/2022 02:19 pm

Cinque Terre

1.14 K

Cinque Terre

0

ಸಂಬಂಧಿತ ಸುದ್ದಿ