ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಾಲಾ ಮಕ್ಕಳ ವರ್ಗಾವಣೆ ಪತ್ರ ಸಲ್ಲಿಕೆ ಕಡ್ಡಾಯ: ಖಾಸಗಿ ಶಾಲೆಗಳ ವಿರೋಧ

ವರದಿ: ಗಣೇಶ್ ಹೆಗಡೆ

ಬೆಂಗಳೂರು: ಪೋಷಕರು ತಮ್ಮ ಮಕ್ಕಳ ವರ್ಗಾವಣೆ ಪತ್ರಕ್ಕಾಗಿ ಕೋರಿಕೆ ಸಲ್ಲಿಸಿದ್ದಲ್ಲಿ ಖಾಸಗಿ ಶಾಲೆಗಳು ವಾರದೊಳಗೆ ಪತ್ರ ನೀಡಬೇಕು. ತಪ್ಪಿದಲ್ಲಿ ಶಾಲಾ ಆಡಳಿತ ಮಂಡಳಿ ಅಥವಾ ಮುಖ್ಯ ಶಿಕ್ಷಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್.ವಿಶಾಲ್ ಸುತ್ತೋಲೆ ಹೊರಡಿಸಿದ್ದಾರೆ.

ಅರ್ಥಿಕ ಸಂಕಷ್ಟದಿಂದಾಗಿ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಲಾಗದೇ ನೂರಾರು ಪೋಷಕರು ಸರ್ಕಾರಿ, ಅನುದಾನಿತ ಇತರ ಶಾಲೆಗಳಿಗೆ ದಾಖಲು ಮಾಡಿರೋದು ಕಂಡು ಬಂದಿದೆ.

ಈ ವಿದ್ಯಾರ್ಥಿಗಳ ವರ್ಗಾವಣೆ ಪತ್ರ ನೀಡುವಂತೆ ಸಂಬಂಧಪಟ್ಟ ಶಾಲೆಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಆಡಳಿತ ಮಂಡಳಿ ವರ್ಗಾವಣೆ ಪತ್ರ ನೀಡದೆ ಇರುವುದು ಕಂಡು ಬಂದಿದೆ ಎಂದು ಅಯುಕ್ತರು ಆಕ್ಷೇಪಿಸಿದ್ದಾರೆ‌.

ಈ ಬಗ್ಗೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಪೋಷಕರು ದೂರು ಸಲ್ಲಿಸಬಹುದು ಎಂದು ಸೂತ್ತೋಲೆಯಲ್ಲಿ ತಿಳಿಸಿದ್ದಾರೆ.

ಇದಕ್ಕೆ ಖಾಸಗಿ ಶಾಲಾ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದೆ. ಅಧಿಕಾರಿಗಳು ಮೇಲಿಂದ ಮೇಲೆ ಆದೇಶ ಹೊರಡಿಸಿ ಬಿಇಒ ಗಳಿಂದ ಒತ್ತಡ ಹೇರುವುದು ಸರಿಯಲ್ಲ ಎಂದಿದೆ.

Edited By : Manjunath H D
Kshetra Samachara

Kshetra Samachara

26/11/2021 09:16 am

Cinque Terre

310

Cinque Terre

0

ಸಂಬಂಧಿತ ಸುದ್ದಿ