ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್ ನಿಂದ ಬೆಂಗಳೂರಿಗೆ‌ ಆಗಮಿಸಿದ ಐವರು ವಿದ್ಯಾರ್ಥಿಗಳು

ದೇವನಹಳ್ಳಿ:-ಯುದ್ಧ ಭೀತಿಯ ಉಕ್ರೇನ್ ನಿಂದ ದೆಹಲಿಗೆ ಬಂದು, ಅಲ್ಲಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ‌ ನಿಲ್ದಾಣಕ್ಕೆ ಇಂದು ರಾತ್ರಿ ೮ ಗಂಟೆಗೆ ಏರ್ ಏಷಿಯಾ ವಿಮಾನದಲ್ಲಿ 5 ಜನ ವಿದ್ಯಾರ್ಥಿಗಳು ತಾಯಿನಾಡಿಗೆ ವಾಪಸ್ಸಾಗಿದ್ದಾರೆ.

ಶ್ರವಣ ಸಂಗಣ್ಣ ಬಿರಾದಾರ್, ಶಕ್ತೀಶ್ರೀ ಶೇಖರ್, ಮೈನಾ ಅನಿಲ್ನಾಯಕ್,ನಿಹಾರಿಕಾ, ಆಶಾ ವೆಂಕಟೇಶ್ ರೆಡ್ಡಿ ವಾಪಸ್ಸಾದ ವಿದ್ಯಾರ್ಥಿಗಳು.

ತಮ್ಮ ಮಕ್ಕಳು ವಾಪಸ್ ಬಂದ ಹಿನ್ನಲೆ ಪೋಷಕರಲ್ಲಿ ಸಂತಸ ಮನೆಮಾಡಿತ್ತು.ಮಕ್ಕಳು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ವಿದ್ಯಾರ್ಥಿಗಳನ್ನ ಪೋಷಕರು ಆತ್ಮೀಯ ವಾಗಿ ಬರಮಾಡಿಕೊಂಡರು.

ದೇವನಹಳ್ಳಿಯ ಕೆಂಪೇಗೌಡ ವಿಮಾನ‌ ನಿಲ್ದಾಣಕ್ಕೆ ಮೊಮ್ಮಗಳು ಬರುತ್ತಿದ್ದದ್ದನ್ನ ಕಂಡು ಅಜ್ಜಿಯೊಬ್ಬರು ಆನಂದದಿಂದ ಕಣ್ಣೀರು ಹಾಕಿದರು. ಅಂತೂ ಐದು ಜನ‌ ಮಕ್ಕಳ ಆಗಮನದಿಂದ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ..

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ

Edited By : Nagesh Gaonkar
PublicNext

PublicNext

28/02/2022 10:21 pm

Cinque Terre

32.19 K

Cinque Terre

0

ಸಂಬಂಧಿತ ಸುದ್ದಿ