ಬೆಂಗಳೂರು: ಆಭರಣವೆಂದರೆ ಹೆಚ್ಚಾಗಿ ಎಲ್ಲರಿಗೂ ಪ್ರೀತಿನೇ. ಹಬ್ಬ, ಹರಿದಿನಗಳು ಬಂದಾಗ ಸಹಜವಾಗಿ ವಿನೂತನ ವಿನ್ಯಾಸದ ಆಭರಣಗಳನ್ನು ತೆಗೆದುಕೊಳ್ಳಬೇಕು ಎಂಬ ಆಸೆ ಹೆಣ್ಣುಮಕ್ಕಳಿಗಂತೂ ಹೆಚ್ಚಾಗಿಯೇ ಇರುತ್ತದೆ. ಆಭರಣ ಪ್ರಿಯರಿಗಾಗಿ ಗೋಲ್ಡನ್ ಕ್ರೀಪರ್ ಎಂಟರ್ ಪ್ರೈಸಸ್ ರಾಜಾಜಿನಗರದಲ್ಲಿರುವ ಶರಟನ್ ಗ್ರ್ಯಾಂಡ್ ನಲ್ಲಿ ‘ದ ಜ್ಯುವೆಲ್ಲರಿ ಶೋ’ ಆಯೋಜಿಸಲಾಗಿದೆ. ಅಕ್ಟೋಬರ್ 7, 8, ಹಾಗೂ 9ರಂದು ಮೂರು ದಿನಗಳ ಕಾಲ ನಡೆಯಲಿರುವ ಈ ಆಭರಣ ಮೇಳವನ್ನು ನಟಿ ಧನ್ಯಾ ರಾಮ್ ಕುಮಾರ್ ಉದ್ಘಾಟಿಸಿದ್ದಾರೆ.
ಇನ್ನು ಈ ಆಭರಣ ಪ್ರದರ್ಶನವನ್ನು ಉದ್ಘಾಟಿಸಿದ ನಟಿ ಧನ್ಯಾ ರಾಮ್ ಕುಮಾರ್ ಇಲ್ಲಿನ ಆಭರಣ ಸಂಗ್ರಹದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾ “ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ನನಗೆ ತುಂಬಾನೇ ಸಂತೋಷವಾಗಿದೆ ಇಲ್ಲಿರುವ ಎಲ್ಲಾ ಆಭರಣಗಳು ಒಂದಕ್ಕಿಂತ ಒಂದು ಸುಂದರವಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಆಭರಣ ಪ್ರದರ್ಶನವನ್ನು ಕಣ್ತುಂಬಿಕೊಳ್ಳುವುದೇ ಒಂದು ಸಡಗರ. ಟ್ರೆಂಡ್ ಪ್ರಿಯರಿಗಾಗಿ ಇಲ್ಲಿ ಹೊಸ ಹೊಸ ವಿನ್ಯಾಸದ ಆಭರಣಗಳು ಇವೆ.ಪ್ರತಿಯೊಂದು ಸಂಗ್ರಹವು ವಿನೂತನ ಹಾಗೂ ವಿಶಿಷ್ಟವಾಗಿದೆ” ಎಂದರು.
ಹಾಗೇ ಗೋಲ್ಡನ್ ಕ್ರೀಪರ್ ಎಂಟರ್ ಪ್ರೈಸಸ್ ನ ಜಗದೀಶ್ ಬಿ.ಎನ್ ಅವರು ಮಾತನಾಡುತ್ತಾ ಮೊದಲ ದಿನವೇ ನಮಗೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ದೊರಕಿದೆ. ಇಲ್ಲಿ ಸಿಗುವ ಆಭರಣಗಳು ನಿಮಗೆ ಬೇರೆಲ್ಲೂ ಕೂಡ ಸಿಗುವುದಿಲ್ಲ. ಅಂತಹ ವಿಭಿನ್ನ ವಿನ್ಯಾಸದ ಆಭರಣಗಳು ಇಲ್ಲಿವೆ. ಹೊಸತನದ ತುಡಿತವಿರುವವರಿಗೆ ಮೂರು ದಿನಗಳ ಕಾಲ ನಡೆಯಲಿರುವ ಈ ಆಭರಣ ಪ್ರದರ್ಶನ ಅತ್ಯುತ್ತಮವಾದ ಅವಕಾಶವಾಗಿದೆ. ಜೊತೆಗೆ ಒಂದೇ ಸೂರಿನಡಿ ನಿಮಗೆ ಇಷ್ಟವಾಗುವ ಆಭರಣಗಳು ದೊರೆಯಲಿದೆ” ಎಂದು ತಿಳಿಸಿದರು.
ಮದುವೆ ಕಾರ್ಯಕ್ರಮ, ದೀಪಾವಳಿ ಹಬ್ಬದ ವಿಶೇಷ ಸಂದರ್ಭಕ್ಕಾಗಿ ನಾನಾ ವಿನ್ಯಾಸದ ಆಭರಣಗಳನ್ನು ಕೊಳ್ಳಲು ಇದೊಂದು ಉತ್ತಮ ತಾಣವಾಗಿದೆ. ಈ ಆಭರಣ ಮೇಳದಲ್ಲಿ ದೇಶದ ವಿವಿಧ ಕುಶಲಕರ್ಮಿಗಳು ತಯಾರಿಸಿದ ವಿನೂತನ ಶೈಲಿಯ ಒಡವೆಗಳು ದೊರೆಯಲಿದ್ದು ಹೆಂಗಳೆಯರ ಮನಸ್ಸನ್ನು ಸೆಳೆಯಲಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾಗೂ ಕೈಗೆಟಕುವ ದರದಲ್ಲಿ ಇಲ್ಲಿ ಆಭರಣಗಳು ದೊರೆಯಲಿದೆ.ಹಾಗೇ ಬಿಐಎಸ್ ಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣ, ಅಂತರಾಷ್ಟ್ರೀಯ ಗುಣಮಟ್ಟದ ಜಿಐಎ/ಐಜಿಐ ಪ್ರಮಾಣಿತ ವಜ್ರಾಭರಣಗಳು ಇಲ್ಲಿ ಲಭ್ಯವಿದ್ದು, ಇದರ ಜೊತೆಗೆ ಖರೀದಾರರಿಗೆ ತಮ್ಮ ಹಳೆಯ ಚಿನ್ನವನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ಕೂಡ ಈ ಮೇಳದಲ್ಲಿ ನೀಡಲಾಗಿದೆ.
Kshetra Samachara
07/10/2022 07:40 pm