ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

30 ವರ್ಷಗಳ ನಂತರ ಕೋಡಿಬಿದ್ದ ಚಿಕ್ಕನಹಳ್ಳಿ ಕೆರೆಗೆ ಬಾಗಿನ ಅರ್ಪಣೆ

ಬೆಂ.ಗ್ರಾಮಾಂತರ: ದೇವನಹಳ್ಳಿ ತಾಲೂಕಿನ ವಿಜಯಪುರದ ಚಿಕ್ಕನಹಳ್ಳಿ ಕೆರೆ ತುಂಬಿ ಕೋಡಿ ಬಿದ್ದು 30 ವರ್ಷ ಆಗಿತ್ತು. ದಶಕಗಳ ನಂತರ ಕೋಡಿಬಿದ್ದ ವಿಜಯಪುರ ಕೆರೆ ಸೊಬಗನ್ನ ಕಣ್ತುಂಬಿಕೊಳ್ಳಲು ಸಾವಿರಾರು ಜನ ಕೆರೆ ಬಳಿಗೆ ಆಗಮಿಸುತ್ತಿದ್ದಾರೆ‌. ಕಳೆದ ಮೂರ್ನಾಲ್ಕು ದಿನದಿಂದ ಸುರಿದ ಭಾರಿ ಮಳೆಗೆ ವಿಜಯಪುರ ಸಮೀಪದ ಚಿಕ್ಕನಹಳ್ಳಿ ಕೆರೆ ತುಂಬಿ‌ ಕೋಡಿ ಹರಿದಿದೆ. ಮೂವತ್ತು ವರ್ಷಗಳ ನಂತರ ವಿಜಯಪುರದ ಕೆರೆ ತುಂಬಿದ್ದು, ಬಯಲುಸೀಮೆ ನಾಗರೀಕರು ಇದರಿಂದ ಸಂತಸಗೊಂಡಿದ್ದಾರೆ. ಇದೇ ಖುಷಿಗೆ ವಿಜಯಪುರ ನಾಗರೀಕರು ಪುರಸಭೆ ವತಿಯಿಂದ ಬಾಗಿನ ಅರ್ಪಿಸಿದರು.

ಬರಡು ಭೂಮಿಯಾಗಿದ್ದ ಬಯಲುಸೀಮೆಯ ವಿಜಯಪುರ ಕೆರೆ ಇಂದು ತುಂಬಿ ಕೋಡಿ ಹರಿಯುತ್ತಿದೆ. ಪ್ರತಿ ವರ್ಷ ಕೆರೆ ತುಂಬಲಿ, ಅಂತರ್ಜಲ ಮಟ್ಟ ಹೆಚ್ಚಲಿ. ಇದರಿಂದ ಊರಿನ ಜನರ ನೀರಿನ ಬವಣೆ ಕಡಿಮೆ ಆಗುತ್ತೆ ಎಂದು ವಿಜಯಪುರ ಪುರಸಭೆ ಸದಸ್ಯ ಸತೀಶ್ ತಿಳಿಸಿದರು.

ಮಳೆ ಬಂದು ಕೆರೆ ತುಂಬಿದರೆ ಸಂತಸ. ಅಷ್ಟೇ ಆತಂಕವೂ ಇದೆ. ಮಳೆ ಹೆಚ್ಚಾಗಿ ಅನೇಕ ತಗ್ಗು ಪ್ರದೇಶಗಳಿಗೆ ನೀರು‌ ನುಗ್ಗಿ ಮನೆ, ರೈತರ ಬೆಳೆ ಜಲಾವೃತವಾಗಿವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮನೆ ಹಾನಿ & ಬೆಳೆ ನಾಶದ ಪರಿಶೀಲನೆ ನಡೆಸಿ ಪರಿಹಾರ ಒದಗಿಸಬೇಕಿದೆ.

-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.

ಸ್ಲಗ್: ತುಂಬಿದ ಕೆರೆಗೆ ಬಾಗಿನ ಅರ್ಪಣೆ

Edited By : Shivu K
Kshetra Samachara

Kshetra Samachara

08/09/2022 08:43 am

Cinque Terre

5.35 K

Cinque Terre

0

ಸಂಬಂಧಿತ ಸುದ್ದಿ