ನೆಲಮಂಗಲ: ದೇಶದೆಲ್ಲೆಡೆ ಇಂದು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆಯನ್ನ ಅದ್ಧೂರಿಯಾಗಿ ಆಚರಿಸುತ್ತಿದೆ. ಅದೇ ರೀತಿ ನೆಲಮಂಗಲ ತಾಲ್ಲೂಕು ಆಡಳಿತದ ವತಿಯಿಂದಲೂ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 75ನೇ ಸ್ವಾತಂತ್ರ್ಯೋತ್ಸವನ್ನ ಸಂಭ್ರಮದಿಂದ ಆಚರಿಸಲಾಯಿತು.
ಹೌದು ನೆಲಮಂಗಲ ನಗರದಲ್ಲಿ ತಾಲ್ಲೂಕು ಆಡಳಿತ ವರ್ಗ ಮುಂಜಾನೆಯೇ ನಗರದ ಪ್ರವಾಸಿ ಮಂದಿರದಿಂದ ಪ್ರಭಾತ್ ಭೇರಿ ಮೆರವಣಿಗೆ ಅಂಬೇಡ್ಕರ್ ಕ್ರೀಡಾಂಗಣ ತಲುಪುತ್ತಿದ್ದಂತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೆಲಮಂಗಲ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಹಾಗೂ ತಾಲ್ಲೂಕು ದಂಡಾಧಿಕಾರಿ ಮಂಜುನಾಥ್ ರಾಷ್ಟ್ರಗೀತೆಯೊಂದಿಗೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ಎನ್.ಸಿ.ಸಿ ತಂಡ, ಆರಕ್ಷಕರು ಮತ್ತು ಹಲವು ಶಾಲಾ ಮಕ್ಕಳು ಪಥಸಂಚಲನದ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ವಂದನೆಗಳನ್ನ ಸಮರ್ಪಿಸಿದರು.
ಇನ್ನೂ ನಾಡಗೀತೆ, ರೈತಗೀತೆ ಮೂಲಕ ವೇದಿಕೆ ಕಾರ್ಯಕ್ರಮ ಪ್ರಾರಂಭಗೊಳ್ಳುತ್ತಿದ್ದಂತೆ ನೆಲಮಂಗಲ ತಾಲ್ಲೂಕು ಆಡಳಿತ ವರ್ಗ ಶಾಸಕರ ನೇತೃತ್ವದಲ್ಲಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಅಲ್ಲದೆ ಹಲವು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಕಣ್ಮನ ಸೆಳೆದವು. ಒಟ್ಟಾರೆ ಅಮೃತ ಮಹೋತ್ಸವ ಕಾರ್ಯಕ್ರಮವನ್ನ ನೆಲಮಂಗಲ ತಾಲ್ಲೂಕು ಆಡಳಿತ ಅದ್ಧೂರಿಯಾಗಿ ನೆರವೇರಿಸಿದರು..
ಸುಮಿತ್ರ ಪಬ್ಲಿಕ್ ನೆಕ್ಸ್ಟ್ ನೆಲಮಂಗಲ
PublicNext
15/08/2022 04:31 pm