ಬೆಂಗಳೂರು: ಯಲಹಂಕದ ತಾಲೂಕಿನ ಅದ್ದಿಗಾನಹಳ್ಳಿ ಗ್ರಾಮಪಂಚಾಯ್ತಿಗೆ ಐದು ಸಾವಿರ ರಾಷ್ಟ್ರಧ್ವಜ ಹಸ್ತಾಂತರದ ಮೂಲಕ ತ್ರಿವರ್ಣಧ್ವಜ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.
ಮಣಿಪಾಲ್ ವಿದ್ಯಾಸಂಸ್ಥೆ ಬೆಂಗಳೂರು ಯಲಹಂಕದ ಕ್ಯಾಂಪಸ್‌ನಲ್ಲಿ ಸ್ಥಳೀಯ ಅದ್ದಿಗಾನಹಳ್ಳಿ ಗ್ರಾಮಪಂಚಾಯ್ತಿ ಸದಸ್ಯರು, PDO ಅವರ ಜೊತೆ ಸಮನ್ವಯ ಸಾಧಿಸಿ ಸ್ವಾತಂತ್ರ್ಯ ದಿನಾಚರಣೆ ದಿನ ರಾಷ್ಟ್ರಪ್ರೇಮ ತೋರಿಸಿ ತ್ರಿವರ್ಣ ಧ್ವಜ ಹಾರಿಸೋಣ. ಎಂದು ಮಣಿಪಾಲ್ ಸಂಸ್ಥೆಯ ಕುಲಪತಿ ವೆಂಕಟೇಶ್ ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲಾಧಿಕಾರಿಗಳ ಜೊತೆಗೆ ಸ್ಥಳೀಯ ಗ್ರಾಮ ಪಂಚಾಯ್ತಿಗಳ ಮೂಲಕ ಪ್ರತಿ ಮನೆ ಮೇಲೂ ತ್ರಿವರ್ಣ ಧ್ವಜ ಹಾರಿಸಲು ಮುಂಗಾಗಿದೆ. ಆಗಸ್ಟ್ 11ರಿಂದ 17ರ ವರೆಗೂ ಒಂದು ವಾರದ ಕಾಲ ಸಪ್ತಾಹದ ಮೂಲಕ ದೇಶದ ಪ್ರತಿಯೊಬ್ಬರಲ್ಲೂ ರಾಷ್ಟ್ರಭಕ್ತಿ ಮೂಡಿಸುವುದು ನಮ್ಮ ಕರ್ತವ್ಯ. ನಾವೇ ಬೇರೆ ಸಂಘ ಸಂಸ್ಥೆ ಜೊತೆ ಕೈಜೋಡಿಸಿ ಸ್ವಾತಂತ್ರ್ಯ ದಿನೋತ್ಸವವನ್ನು ಅರ್ಥಗರ್ಭಿತವಾಗಿ ಮಾಡಬೇಕು ಎಂದುಕೊಂಡಿದ್ವಿ. ಇಂತಹ ವೇಳೆ ಮಣಿಪಾಲ್ ಸಂಸ್ಥ ಬಂದು ನಮ್ಮ ಅದ್ದಿಗಾನಹಳ್ಳಿ ಗ್ರಾಮ ಪಂಚಾಯ್ತಿಗೆ ತ್ರಿವರ್ಣ ಧ್ವಜ ಹಂಚಿದ್ದಾರೆ. ಈ ಮೂಲಕ ರಾಷ್ಟ್ರಪ್ರೇಮ ಮೂಡಿಸಲು ಮಣಿಪಾಲ್ ಸಂಸ್ಥೆ ಸಹಕಾರ ನೀಡುತ್ತಿರುವುದಕ್ಕೆ ಧನ್ಯವಾದ ಅರ್ಪಿಸಿದರು.
ಭಾರತ ದೇಶ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ವೇಳೆ ಮಣಿಪಾಲ್ ಸಂಸ್ಥೆ ಮತ್ತು ಅದ್ದಿಗಾನಹಳ್ಳಿ ಗ್ರಾಮ ಪಂಚಾಯ್ತಿ ಸ್ವಾತಂತ್ರ್ಯದ ಕಿಚ್ಚನ್ನು ತ್ರಿವರ್ಣಧ್ವಜ ನೀಡುವ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಿರುವುದು ಜನಮೆಚ್ಚುವ ಕೆಲಸ.
Kshetra Samachara
07/08/2022 12:39 pm