ಬೆಂಗಳೂರು : ಇಂದಿನಿಂದ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಶುರುವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ದೊಡ್ಡಮನೆ ಸದಸ್ಯರು 2022ರ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ್ದಾರೆ.
ಇನ್ನು ಆಗಸ್ಟ್ 5ರಿಂದ 15ನೇ ತಾರೀಖಿನವರೆಗೆ ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಲಕ್ಷಾಂತರ ಮಂದಿ ಬರುವ ನಿರೀಕ್ಷೆ ಇದ್ದು, ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ರಾಜಕುಮಾರನ ಮೆರಗು ಇರಲಿದೆ. ಇದನ್ನು ನೋಡಲು ಹಲವಾರು ಮಂದಿ ಲಾಲ್ಬಾಗ್ ಬರುತ್ತಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ, ನಟರಾದ ಶಿವರಾಜ್ ಕುಮಾರ್ ರಾಘವೇಂದ್ರ ರಾಜಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜಕುಮಾರ್ ಭಾಗಿಯಾಗಿದ್ದರು. ಫಲಪುಷ್ಪ ಪ್ರದರ್ಶನದಲ್ಲಿ ವಿಶೇಷವಾಗಿ ಪುನೀತ್ ರಾಜಕುಮಾರ್ ಸಮಾಧಿ ಇಂದ ತಂದಿರುವ ಜ್ಯೋತಿ ದೀಪ ಇಡಲಾಗಿದೆ.ಜೊತೆಗೆ ಗಾಜನೂರಿನ ಮನೆಯನ್ನು ಹೂವಿನಿಂದ ನಿರ್ಮಿಸಲಾಗಿದೆ ಮತ್ತು ವರ ನಟ ಡಾಕ್ಟರ್ ರಾಜಕುಮಾರ್ ಹಾಗೂ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಪುತ್ಥಳಿಯನ್ನು ಸಹ ಇಡಲಾಗಿದೆ.
ಇನ್ನು ದೊಡ್ಮನೆ ಕುಟುಂಬದವರು ಫ್ಲವರ್ ಶೋವನ್ನು ಕಣ್ತುಂಬಿಕೊಂಡಿದ್ದಾರೆ. ಇನ್ನು ಪ್ರತಿದಿನ ಸಾರ್ವಜನಿಕರು ಬೆಳಿಗ್ಗೆ 7 ರಿಂದ ಸಂಜೆ 7 ವರೆಗೂ ಫ್ಲವರ್ ಶೋ ನೋಡಿ ಕಣ್ತುಂಬಿಕೊಳ್ಳಬಹುದು. ಶಾಲೆ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತವಾಗಿದ್ದು,ದೊಡ್ಡವರಿಗೆ 70 ರೂ.ಟಿಕೆಟ್ ಪಡೆದು ಶೋ ನೋಡಬಹುದು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
Kshetra Samachara
05/08/2022 07:36 pm