ಬೆಂಗಳೂರು: ಜುಲೈ 15ರಿಂದ ಒಂದು ವಾರ ಚಿತ್ರಕಲಾ ಪರಿಷತ್ ಆವರಣದಲ್ಲಿ ಬೆಂಗಳೂರು ಉತ್ಸವ ಹೆಸರಿನಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆರಂಭವಾಗಿದೆ. ಕರ್ನಾಟಕ ಚಿತ್ರಕಲಾ ಪರಿಷತ್ ನ ಉಪಾಧ್ಯಕ್ಷ ರಾದ ಪ್ರೊ ಕೆ ಎಸ್ ಅಪ್ಪಾಜಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ ಎಸ್.ಎಸ್, ಸಹಾಯಕ ಕಾರ್ಯದರ್ಶಿ ಬಿ.ಎಲ್ ಶ್ರೀನಿವಾಸ ಮತ್ತು ನಟಿಯರಾದ ಚಂದನಾ ಆನಂತಕೃಷ್ಣ ಹಾಗೂ ಅಪ್ಸರಾ ಚಾಲನೆ ನೀಡಿದರು.
ಈ ಮೇಳದಲ್ಲಿ 80 ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ. ಹಾಗೇ, ಈ ಮೇಳದಲ್ಲಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು, ಮ್ಯಾಟ್, ಪಿಂಗಾಣಿ ವಸ್ತು, ಕಲಾಕೃತಿಗಳು ಸೇರಿದಂತೆ ಅನೇಕ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿದೆ. ಈ ಮೇಳ ಜುಲೈ 15 ರಿಂದ ರಿಂದ ಜುಲೈ 24ರವರೆಗೆ ನಡೆಯಲಿದೆ.
ಇಂದು ಸಹ ನಗರದ ಚಿತ್ರಕಲಾ ಪರಿಷತ್ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾಗುರುವ ಎಂಟು ದಿನಗಳ ವಿಭಾಗೀಯ ಮಟ್ಟದ ಸ್ತ್ರೀ ಶಕ್ತಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಸಚಿವ ಹಾಲಪ್ಪ ಆಚಾರ್ ವೀಕ್ಷಿಸಿದರು. ಬಳಿಕ ಮಾತನಾಡಿದ ಅವ್ರು, ಸರ್ಕಾರದಿಂದ ಆಯೋಜಿಸಲಾಗುವ ವಸ್ತು ಪ್ರದರ್ಶನ ಹಾಗೂ ಮಾರಟ ಮೇಳಗಳು ಗ್ರಾಮೀಣ ಮಹಿಳಾ ಕಿರು ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯ ಅವಕಾಶ ನೀಡುವುದು ಮಾತ್ರವಲ್ಲದೇ, ಅವರಲ್ಲಿ ಆತ್ಮ ಸ್ಥೈರ್ಯವನ್ನೂ ತುಂಬಿಸುವ ಕೆಲಸವನ್ನೂ ಮಾಡುತ್ತವೆ ಎಂದ್ರು.
ಇನ್ನೂ ಮೇಳದಲ್ಲಿ ಒಟ್ಟು 80 ಮಳಿಗೆಗಳು ಇದ್ದು, ಬೆಂಗಳೂರು ವಿಭಾಗದ ಎಂಟು ಜಿಲ್ಲೆಗಳಿಂದ ಬಂದಂತಹ 80 ಸ್ತ್ರೀ ಶಕ್ತಿ ಸಂಘಗಳು ಈ ಮೇಳದಲ್ಲಿ ಪಾಲ್ಗೊಂಡಿವೆ ಎಂದು ಇಲಾಖೆಯ ಬೆಂಗಳೂರು ನಗರ ಜಿಲ್ಲಾ ಉಪನಿರ್ದೇಶಕರಾದ ನಿಶ್ಚಲ್ ಮಾಹಿತಿ ನೀಡಿದರು. ಮೇಳದಲ್ಲಿ ಸಿದ್ದ ಉಡುಪು, ಸೀರೆ, ಚರ್ಮ, ಮರ, ಬಟ್ಟೆ, ಮಣ್ಣು ಹಾಗೂ ಇತರೆ ಪದಾರ್ಥಗಳಿಂದ ತಯಾರಿಸಿದ ಕಲಾಕೃತಿಗಳು, ತಿಂಡಿ, ದೈನಂದಿನ ಅಗತ್ಯ ವಸ್ತುಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ಮೇಳದಲ್ಲಿ ಮಾರಾಟಕ್ಕೆ ಇಡಲಾಗಿದೆ.
Kshetra Samachara
18/07/2022 06:05 pm