ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಾಲಿಕೆ ಸೌಧ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 513ನೇ ಜಯಂತೋತ್ಸವ

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಪಾಲಿಕೆ ಸೌಧ ಅವರಣದಲ್ಲಿ ನಾಡಪ್ರಭು ಕೆಂಪೇಗೌಡರ 513ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಅಚರಿಸಲಾಯಿತು.

ಸಚಿವ ವಿ.ಸೋಮಣ್ಣ ಮಾತನಾಡಿ, ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯಿಂದ ಚಿಂತನೆಯಿಂದ ನಿರ್ಮಿಸಿದ ಕನಸಿನ ಬೆಂಗಳೂರುನಗರ ವಿಶ್ವದ ಗಮನ ಸೆಳದಿದೆ. ಸಮರ್ಥ, ಶೇಷ್ಠ ಆಡಳಿತಗಾರ, ಜಾತ್ಯತೀತ ಸಿದ್ಧಾಂತದ ಹರಿಕಾರ ನಾಡಪ್ರಭು ಕೆಂಪೇಗೌಡರು ಕಾಯಕ ಸಮಾಜವನ್ನು ವೃತಿಯಾಧಾರಿತ 64 ಪೇಟೆಗಳನ್ನು ಬೆಂಗಳೂರು ನಗರದಲ್ಲಿ ನಿರ್ಮಿಸಿದರು ಕಬ್ಬನ್ ಪೇಟೆ, ಅರಳೆಪೇಟೆ, ಗಾಣಿಗರಪೇಟೆ, ಮಡಿವಾಳಪೇಟೆ, ಅಕ್ಕಿಪೇಟೆ, ಹೂವಾಡಿಗರ ಪೇಟೆ, ತರಗುಪೇಟೆ ಹೀಗೆ 64 ಪೇಟೆಗಳನ್ನು ಆಯಾ ವೃತ್ತಿ ಆಧಾರಿತವಾಗಿ ನಿರ್ಮಿಸಿದರು.

ಪರಿಸರದ ಬಗ್ಗೆ ಅಪಾರ ಕಾಳಜಿ ಇದ್ದ ನಾಡಪ್ರಭು ಕೆಂಪೇಗೌಡರು 200ಕ್ಕೂ ಹೆಚ್ಚು ಕೆರೆ ಮತ್ತು ಕಲ್ಯಾಣಿಗಳನ್ನು ನಿರ್ಮಿಸಿದರು. ಬೆಂಗಳೂರು ನಗರದಲ್ಲಿ ಪರಿಸರ ಉಳಿಸಲು ಬೀದಿ ಬದಿಯಲ್ಲಿ ಸಸಿ ನೆಡಿಸಿ ಪರಿಸರ ಉಳಿಸಲು ಶ್ರಮಿಸಿದರು. ನಗರದಲ್ಲಿ ಹಲವಾರು ದೇವಸ್ಥಾನಗಳನ್ನು ನಿರ್ಮಿಸಿದ್ದರು. ಮಾಜಿ ಪ್ರಧಾನಿ ವಾಜಪೇಯಿ ಅವರ ಆಡಳಿತದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರು ಇಡಲಾಯಿತು. ಮತ್ತು ನಮ್ಮ ಸರ್ಕಾರದ ಅವಧಿಯಲ್ಲಿ ಯಲಹಂಕದಲ್ಲಿ ಅತಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕರ್ಪಣೆಯಾಗಲಿದೆ. ನಾಡಪ್ರಭು ಕೆಂಪೇಗೌಡರ ಆದರ್ಶ ಚಿಂತನೆಗಳು, ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದಿನ ಯುವ ಸಮೂಹ ಸಾಗಿದರೆ ಸಮಾಜ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.

Edited By : Shivu K
Kshetra Samachara

Kshetra Samachara

28/06/2022 07:45 am

Cinque Terre

5.94 K

Cinque Terre

0

ಸಂಬಂಧಿತ ಸುದ್ದಿ