ದೊಡ್ಡಬಳ್ಳಾಪುರ: ಸುಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದವತಿಯಿಂದ ಲೋಕಕಲ್ಯಾರ್ಥವಾಗಿ ಸುಬ್ರಹ್ಮಣ್ಯ ಸ್ವಾಮಿಯ ಕಲ್ಯಾಣೋತ್ಸವ ಜರುಗಿತು.ಕಲ್ಯಾಣೋತ್ಸವದ ಅಂಗವಾಗಿ ಲಕ್ಷ್ಮೀನರಸಿಂಹ ಸ್ವಾಮಿ ಸಮೇತ ಸುಬ್ರಹ್ಮಣ್ಯ ಸ್ವಾಮಿಯ ಉದ್ಭವ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಸೇವಾಕರ್ತರಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಂಟಿ ಕಾರ್ಯದರ್ಶಿ ಎಸ್.ಮುರಳೀಧರ ಮಾತನಾಡಿ, ಶ್ರೀಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವಾ ಕಾರ್ಯಗಳನ್ನು ಮಾಡುತ್ತಿದ್ದೇವೆ. ಕೊರೊನಾ ನಿಯಂತ್ರಣ, ಸೈನಿಕರು ಹಾಗೂ ರೈತರ ಅಭ್ಯುದಯಕ್ಕಾಗಿ ಪ್ರಾರ್ಥಿಸಿ ಕಲ್ಯಾಣೋತ್ಸವ ನಡೆಸಿದ್ದೇವೆ. ಇನ್ನಷ್ಟು ಭಕ್ತ ಸಮುದಾಯ ಸ್ವಾಮಿಯ ಸೇವಾ ಕಾರ್ಯದಲ್ಲಿ ಭಾಗವಹಿಸಿ, ಕೃಪೆಗೆ ಪಾತ್ರರಾಗಲಿ ಎಂದು ಆಶಿಸುತ್ತೇನೆ ಎಂದರು.
ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅರ್ಚಕ ಗುರುರಾಜ ಶರ್ಮಾ ಅವರು ಮಾತನಾಡಿ, ಶ್ರಿಕ್ಷೇತ್ರದಲ್ಲಿ ಏಳು ಅಡಿಯ ಸರ್ಪರೂಪದ ಸುಬ್ರಹ್ಮಣ್ಯೇಶ್ವರ ಉದ್ಭವ ಮೂರ್ತಿ ಇದೆ. ಇಲ್ಲಿ ಸ್ವಾಮಿಯ ಸೇವೆ ಮಾಡುವುದರಿಂದ ಸರ್ಪದೋಷಗಳು ನಿವಾರಣೆಯಾಗಲಿದೆ. ಸ್ವಾಮಿಯ ಕಲ್ಯಾಣೋತ್ಸವ ನಡೆಸಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಾರ್ಯ ಶ್ಲಾಘನೀಯವಾದದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲ್ಯಾಣೋತ್ಸವದಲ್ಲಿ ದೇವಸ್ಥಾನ ಪ್ರಧಾನ ಅರ್ಚಕ ಸುಬ್ಬುಕೃಷ್ಣ ಶಾಸ್ತ್ರಿ ಸೇರಿ ಹಲವು ಭಕ್ತರು ಪಾಲ್ಗೊಂಡಿದ್ದರು.
Kshetra Samachara
06/04/2022 07:32 pm