ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವೇಮನ ಜಯಂತ್ಯುತ್ಸವದಲ್ಲಿ ಮಾತನಾಡಲು ನಿರಾಕರಣೆ; ರೆಡ್ಡಿ ಸಮುದಾಯ ಪ್ರತಿಭಟನೆ

ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕು ಆಡಳಿತ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ ಮಹಾಯೋಗಿ ವೇಮನ 610ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ರೆಡ್ಡಿ ಸಮುದಾಯಕ್ಕೆ ವೇದಿಕೆ ಮೇಲೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲು ಅವಕಾಶ ನೀಡದಿರುವುದರಿಂದ ಮಾಜಿ ಶಾಸಕ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ನೇತೃತ್ವದಲ್ಲಿ ರೆಡ್ಡಿ ಸಮುದಾಯದ ಮುಖಂಡರು ತಾಲೂಕು ಕಚೇರಿ ಮುಂದೆ ದಂಡಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಬೇರೆ ಬೇರೆ ಸಮಾಜದ ಜಯಂತಿಗಳನ್ನು ಅದ್ಧೂರಿಯಾಗಿ ಮಾಡಿ, ಇಡೀ ಭಾರತ ದೇಶಕ್ಕೆ ಹಿತವಾದ ವಿಚಾರಧಾರೆಗಳನ್ನು ನೀಡಿದ ವೇಮನ ಅವರ ಜಯಂತಿಯನ್ನು ಅಲ್ಪಕಾಲಾವಧಿಯಲ್ಲಿಯೇ ಮುಗಿಸಿರುವುದನ್ನು ಖಂಡಿಸಿದರು. ಪೂರ್ವ ತಾಲೂಕಿನಲ್ಲಿ ರೆಡ್ಡಿ ಸಮುದಾಯದ ಹಲವಾರು ಬೇಡಿಕೆಗಳಿದ್ದು, ಆದರೆ ಕಾರ್ಯಕ್ರಮವನ್ನು ಒಂದೇ ವಾಕ್ಯದಲ್ಲಿ ಮುಗಿಸಿ ವೇಮನ ಅವರಿಗೆ ಅವಮಾನಿಸಲಾಗಿದೆ ಎಂದು ಕಿಡಿ ಕಾರಿದರು.

ಅಲ್ಲದೆ, ಸಚಿವ ಬೈರತಿ ಬಸವರಾಜ ಹಾಗೂ ತಾಲೂಕು ದಂಡಾಧಿಕಾರಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಾಸಕ‌ ಅರವಿಂದ ಲಿಂಬಾವಳಿ, ಸಂಸದ ಪಿ.ಸಿ.‌ಮೋಹನ್, ರಾಜ್ಯಸಭಾ ಸದಸ್ಯರಾದ ಕೆ.ಸಿ.ರಾಮಮೂರ್ತಿ ಭಾಗವಹಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

19/01/2022 08:46 pm

Cinque Terre

1.65 K

Cinque Terre

0

ಸಂಬಂಧಿತ ಸುದ್ದಿ