ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆ.ಆರ್ ಪುರ: "ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ಮಹನೀಯರು ಸದಾ ಸ್ಮರಣೀಯರು"

ಕೆ.ಆರ್. ಪುರ: ಇಲ್ಲಿನ ಐಟಿಐ ಆವರಣದಲ್ಲಿ ಐಟಿಐ ಕರ್ನಾಟಕ ಸಂಘ ವತಿಯಿಂದ ಆಯೋಜಿಸಿದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವರು, ಕನ್ನಡ ನಾಡು, ನುಡಿಗಾಗಿ ಶ್ರಮಿಸಿದ ಮಹನೀಯರನ್ನು ಗೌರವಿಸುತ್ತಾ ಕನ್ನಡದ ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸುವಂತೆ ವಿನಂತಿಸಿದರು. ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟ ಕಿಡಿಗೇಡಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

ಆರೂವರೆ ಕೋಟಿ ಅನುದಾನದಲ್ಲಿ ಐಟಿಐ ಸುತ್ತಮುತ್ತಲಿನ ರಸ್ತೆಗಳೆಲ್ಲವನ್ನೂ ಅಭಿವೃದ್ದಿಗೊಳಿಸಲಾಗುವುದು ಎಂದು ಭರವಸೆ ನೀಡಿದ ಅವರು, ಕೋವಿಡ್ ನಿಂದ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತಿದೆ. ನಾನಾ ರಾಜ್ಯಗಳಿಂದ ವಲಸೆ ಬಂದು ಇಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ಕಲಿಯಬೇಕೆಂದು ಮನವಿ ಮಾಡಿದರು. ಜ್ಯೂ. ರಾಜ್ ಕುಮಾರ್ ಹಾಗೂ ಜ್ಯೂ. ಪುನೀತ್ ರಾಜ್‍ಕುಮಾರ್ ಸಭಿಕರನ್ನು ರಂಜಿಸಿದರು. ಐಟಿಐ ಬೆಂಗಳೂರು ಘಟಕ ಮುಖ್ಯಸ್ಥ ಬಿ.ಸಿ.ಶರ್ಮಾ, ಐಟಿಐ ಕರ್ನಾಟಕ ಸಂಘ ಅಧ್ಯಕ್ಷ ಜಿತೇಂದ್ರ ನಾಯಕ್, ಸಮಾಜ ಸೇವಕ ಬಾಕ್ಸರ್ ನಾಗರಾಜ್ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

29/12/2021 07:36 am

Cinque Terre

288

Cinque Terre

0

ಸಂಬಂಧಿತ ಸುದ್ದಿ