ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಹಾಲು ಕರೆಯುವ ಸ್ಪರ್ಧೆ; ಗುಂಜೂರಿನ ಹಾಲು ಸೂರಿ ತಂಡಕ್ಕೆ ಪ್ರಶಸ್ತಿ

ಬೆಂಗಳೂರು: ಪ್ರತಿವರ್ಷದಂತೆ ಈ ವರ್ಷವೂ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ಹಾಲು ಕರೆಯುವ ಸ್ಪರ್ಧೆ ಜರುಗಿತು.

ಕರುನಾಡ ಗೋಪಾಲಕರ ಸಂಘದ ವತಿಯಿಂದ ಪಟ್ಟಣದ ಶಾಲಾ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ ಈ ವರ್ಷವೂ ನೂರಕ್ಕೂ ಹೆಚ್ಚು ಹಸುಗಳು ಪಾಲ್ಗೊಂಡಿದ್ದವು. ಮೂರು ದಿನದ ಈ ಸ್ಪರ್ಧೆಯಲ್ಲಿ ಆನೇಕಲ್ ತಾಲೂಕಿನ ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದ ರೈತರು ತಮ್ಮ ಹಸುಗಳನ್ನು ಕರೆದುಕೊಂಡು ಬಂದು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಎರಡು ದಿನ, ಎರಡು ಸುತ್ತಿನಂತೆ ನಡೆದ ಹಾಲು ಕರೆಯುವ ಸ್ಪರ್ಧೆಯಲ್ಲಿ ಕೊನೆ ದಿನವಾದ ನಿನ್ನೆ ರಾತ್ರಿ ಅಂತಿಮವಾಗಿ 12 ಮಂದಿ ಉಳಿದಿದ್ದರು. ಕೊನೆಗೆ ಗುಂಜೂರು ಮೂಲದ ಹಾಲು ಸೂರಿ ಹಾಗೂ ಸ್ನೇಹಿತರ ಹಸು ಒಟ್ಟು 47 ಲೀಟರ್ ಹಾಲು ಕರೆದು ಮೊದಲ ಸ್ಥಾನ ಗಿಟ್ಟಿಸಿದ್ದಾರೆ.

ಇನ್ನು ಉಳಿದಂತೆ 6 ಬಹುಮಾನಗಳನ್ನು ಆನೇಕಲ್ ತಾಲೂಕಿನ ವಿವಿಧ ಗ್ರಾಮಗಳ ರೈತರು ತಮ್ಮದಾಗಿಸಿಕೊಂಡರು. ಪ್ರತಿವರ್ಷವೂ ಹೈನುಗಾರಿಕೆ ಉದ್ಯಮ ಕಡಿಮೆಯಾಗುತ್ತಾ ಬರುತ್ತಿದೆ. ಇದೇ ವಿಚಾರವಾಗಿ ರೈತರನ್ನು ಉತ್ತೇಜಿಸಲು ಈ ಸ್ಪರ್ಧೆ ನಡೆಸಲಾಗುತ್ತಿದೆ.

Edited By : Nagesh Gaonkar
Kshetra Samachara

Kshetra Samachara

06/12/2021 06:48 pm

Cinque Terre

742

Cinque Terre

0

ಸಂಬಂಧಿತ ಸುದ್ದಿ