ವರದಿ: ಗಣೇಶ್ ಹೆಗಡೆ
ಬೆಂಗಳೂರು: ಉದ್ಯಾನ ನಗರಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಇಂದು ಚಾಲನೆ ನೀಡಲಾಯಿತು. ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ , ಶಾಸಕ ರವಿ ಸುಬ್ರಹ್ಮಣ್ಯ ಹಾಗೂ ಶಾಸಕ ಉದಯ ಗರುಡಾಚಾರ್ 'ದೊಡ್ಡ ಗಣೇಶ' ನಿಗೆ ಪೂಜೆ ಸಲ್ಲಿಸಿ, ನಂದಿ ವಿಗ್ರಹಕ್ಕೆ ಕಡಲೇಕಾಯಿ ಅಭಿಷೇಕ ನೆರವೇರಿಸಿ ಮೂರು ದಿನಗಳ ಸಾಂಸ್ಕೃತಿಕ ಪ್ರತೀಕವಾದ ಪರಿಷೆಗೆ ಚಾಲನೆ ನೀಡಿದರು.
ಕಡಲೇಕಾಯಿ ಪರಿಷೆಯನ್ನು ಬಿಬಿಎಂಪಿ ಹಾಗೂ ಮುಜರಾಯಿ ಇಲಾಖೆ ಸಹಯೋಗದೊಂದಿಗೆ ನಡೆಸಲಾಗುತ್ತದೆ. ಕಾರ್ತಿಕ ಸೋಮವಾರ ಇಂದಿನಿಂದ ಕಡಲೇಕಾಯಿ ಪರಿಷೆ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನ ಅವರಣದಲ್ಲಿ ಜರುಗಲಿದೆ.
ಇಲ್ಲಿನ ರಸ್ತೆ ಹಾಗೂ ಸುತ್ತಮುತ್ತಲಿನ ಬೀದಿಗಳಲ್ಲಿ ಕಡಲೇಕಾಯಿ ಮಾರಾಟ ಆಟಿಕೆ, ತಿಂಡಿ ತಿನಿಸು, ಬಟ್ಟೆ, ಮನೆಯ ಅಡಿಗೆ ಸಾಮಾನು, ಕರಕುಶಲ ವಸ್ತು ಮಾರಾಟ ನಡೆಯುತ್ತಿದೆ.
Kshetra Samachara
29/11/2021 02:14 pm