ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಸರ್ವೇಯರ್!

ಆನೇಕಲ್ :ಜಾಗವನ್ನ ಸರ್ವೇ ಮಾಡಿ ಕೊಡುವ ವಿಚಾರವಾಗಿ ಸರ್ವೇಯರ್ ಲಂಚದ ಹಣವನ್ನ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿರುವಂತಹ ಘಟನೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ವೆಂಕಟೇಶ್ವರ ಚಿತ್ರ ಮಂದಿರದ ಬಳಿಯ ಟೀ ಅಂಗಡಿಯ ಬಳಿ ಸರ್ವೇಯರ್ ಕಿರಣ್ ಕುಮಾರ್ 6,000 ರೂ ಮುಂಗಡ ಲಂಚದ ಹಣವನ್ನ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ

ಜಿಗಣಿ ಹೋಬಳಿ ಹಾರಗದ್ದೆ ಗ್ರಾಮದ ಸರ್ವೇ ನಂಬರ್ 44/4 ರ 10 ಗುಂಟೆ ಜಾಗವನ್ನ ಸರ್ವೇ ಮಾಡಿ ಬಂದೋಬಸ್ತ್ ಮಾಡಿಕೊಡುವ ವಿಚಾರವಾಗಿ ಪ್ರದೀಪ್ ಹೆಚ್.ಆರ್ ಎಂಬುವವರು ಸರ್ವೇಯರ್ ಕಿರಣ್ ಕುಮಾರ್ ಬಳಿ ಮನವಿ ಮಾಡಿಕೊಂಡಿದ್ದರು.

ಈ ವೇಳೆ ಸರ್ವೇಯರ್ ಕಿರಣ್ ಕುಮಾರ್ ಕೆಲಸ ಮಾಡಿಕೊಡಲು 50 ಸಾವಿರ ರೂ ಲಂಚದ ಬೇಡಿಕೆಯನ್ನಿಟ್ಟಿದ್ದ. ಈ ಬಗ್ಗೆ ಪ್ರದೀಪ್ ಕುಮಾರ್ ಎಂಬುವವರು ಎಸಿಬಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಅದರಂತೆಯೇ ಸಂಜೆ 7 ಗಂಟೆಯ ಸುಮಾರಿಗೆ ಟೀ ಅಂಗಡಿಯ ಬಳಿ ಸರ್ವೇಯರ್ ಕಿರಣ್ ಕುಮಾರ್ ಲಂಚ ಪಡೆಯುವಾಗ ಎಸಿಬಿ ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿ, ಲಂಚ ಪಡೆಯುತ್ತಿದ್ದ ಅಧಿಕಾರಿಯನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ‌...

Edited By : PublicNext Desk
Kshetra Samachara

Kshetra Samachara

11/06/2022 03:05 pm

Cinque Terre

5.17 K

Cinque Terre

0

ಸಂಬಂಧಿತ ಸುದ್ದಿ