ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ʼಗಂಗೇನಹಳ್ಳಿ ಊರಹಬ್ಬ ಜಾತ್ರಾ ಸಂಭ್ರಮೋತ್ಸವʼ; ರಂಗೋಲೆ- ಕ್ರೀಡಾ ಕಲರವ

ಹೆಬ್ಬಾಳ: ನಮ್ಮ ಸಮಾಜದಲ್ಲಿ ಮೇಲು-ಕೀಳು, ಬಡವ- ಬಲ್ಲಿದ, ಶ್ರೇಷ್ಠ-ಕನಿಷ್ಠ ಎಂಬ ಭೇದಭಾವಗಳಿವೆ. ಆದರೆ, ಹಬ್ಬ- ಹರಿದಿನ ಇವೆಲ್ಲವನ್ನೂ ಬದಿಗೊತ್ತಿ "ನಾವೆಲ್ಲಾ ಒಂದೇ" ಎಂಬ ಸಂಕೇತವನ್ನು ಸಾರುತ್ತವೆ. ಇಂತಹ ಒಗ್ಗಟ್ಟಿಗೆ ಸಾಕ್ಷಿಯಾಗಿತ್ತು ಬೆಂಗಳೂರಿನ ಹೆಬ್ಬಾಳದ ಗಂಗೇನಹಳ್ಳಿಯ ಶ್ರೀ ಮುನೇಶ್ವರ ದೇವರ ಊರಹಬ್ಬ.

ಬೆಂಗಳೂರು ಉತ್ತರ ಭಾಗದ ಹೆಬ್ಬಾಳಕ್ಕೆ ಹೊಂದಿಕೊಂಡಿರುವ ಗಂಗೇನಹಳ್ಳಿಯ ಗಿಡ್ಡಪ್ಪ ಗಾರ್ಡನ್‌ ನ ಶ್ರೀ ಮುನೇಶ್ವರ ದೇವರ ಊರಹಬ್ಬ 3 ದಿನಗಳಿಂದ ಜನರನ್ನು ನಾನಾ ಆಟ- ಸಾಂಸ್ಕೃತಿಕೋತ್ಸವ ಮೂಲಕ ರಂಜಿಸಿತು. ಮಹಿಳೆಯರು- ಮಕ್ಕಳಿಗಾಗಿ ಏರ್ಪಡಿಸಿದ್ದ ಮ್ಯೂಸಿಕಲ್ ಚೆಯರ್ ಮತ್ತು ರಂಗೋಲೆ ಸ್ಪರ್ಧೆಯಲ್ಲಿ ನೂರಾರು ಜನ ಭಾಗವಹಿಸಿ, ತಮ್ಮ ಪ್ರತಿಭೆ ತೋರಿ ಬಹುಮಾನ ಪಡೆದು ಸಂಭ್ರಮಿಸಿದರು.

ಹಿರಿಯರ ಮಾರ್ಗದರ್ಶನದಲ್ಲಿ ಹತ್ತಾರು ವರ್ಷಗಳಿಂದ ಮುನೇಶ್ವರ ಗೆಳೆಯರ ಬಳಗ ಊರಹಬ್ಬವನ್ನು ದೊಡ್ಡ ಜಾತ್ರೆ ರೀತಿ ಆಚರಿಸಿಕೊಂಡು ಬರ್ತಿದೆ. ಕೊರೊನಾ ಕಾರಣದಿಂದ ಹಬ್ಬದ ಸಂಭ್ರಮ 2 ವರ್ಷಗಳಿಂದ ಸ್ಥಗಿತವಾಗಿತ್ತು. ಇಂದು ಹಬ್ಬದ ಪ್ರಯುಕ್ತ ನಡೆದ ಅನ್ನದಾನದಲ್ಲಿ ಸಾವಿರಾರು ಮಂದಿ ಭಾಗವಹಿಸಿದರು.

- ಸುರೇಶ್ ಬಾಬು Public Next ಹೆಬ್ಬಾಳ

Edited By : Manjunath H D
Kshetra Samachara

Kshetra Samachara

10/05/2022 01:21 pm

Cinque Terre

4.06 K

Cinque Terre

0

ಸಂಬಂಧಿತ ಸುದ್ದಿ