ಪ್ರವೀಣ್ ರಾವ್
ಬೆಂಗಳೂರು: ತಮ್ಮ ವಿಶಿಷ್ಟವಾದ ಮತ್ತು ನಿರಂತರವಾದ ಸಮಾಜಸೇವೆಯಿಂದ ನಾಡಿನಾದ್ಯಂತ ಹೆಸರುವಾಸಿಯಾಗಿರುವ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ತಿಂಡಿ ಕೇಂದ್ರದ ಡಾ ಕೆ.ವಿ. ರಾಮಚಂದ್ರ ಅವರು ಇಂದು ಸುಮಾರು 75 ಅನಾಥ ಮಕ್ಕಳಿಗೆ ವಿಶೇಷವಾದ ಉಪಹಾರ ವಿತರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು..
ಕಾರ್ಯಕ್ರಮಕ್ಕೆ ಆಗಮಿಸಿದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರು ಭಾರತ ಮಾತೆ, ಮಹಾತ್ಮಗಾಂಧೀಜಿ, ಲಾಲಬಹಾದ್ದೂರ್ ಶಾಸ್ತ್ರಿ ಯವರ ಭಾವಚಿತ್ರಗಳಿಗೆ ಆರತಿ ಬೆಳಗಿ ಪುಷ್ಪಾರ್ಚನೆ ಗೈಯ್ದರು. ಆನಂತರ ಶಾಸಕ ಜಮೀರ್ ಅವರು ಎಲ್ಲಾ ಮಕ್ಕಳಿಗೆ ಸುಮಾರು 50 ಸಾವಿರ ವೆಚ್ಚದ ಪಾದರಕ್ಷೆಗಳನ್ನು ಒದಗಿಸಿದರು...
ಹೀಗೆ ಮುಗ್ಧ ಮಕ್ಕಳ ಸಂತಸದ ನಗುವಿನಲ್ಲಿ ಮಹಾತ್ಮನ ಜನ್ಮದಿನದ ಸಾರ್ಥಕತೆಯನ್ನು ಕಂಡರು ರಾಮಚಂದ್ರ....
PublicNext
03/10/2022 01:00 pm