ಗಣೇಶ ಇಡಲು ಅನುಮತಿಗಾಗಿ ಅಲೆದಾಡಬೇಕಾಗಿಲ್ಲ. ಬೆಸ್ಕಾಂ ಪೊಲೀಸ್ ಬಿಬಿಎಂಪಿ ಪ್ರತ್ಯೇಕ ಅನುಮತಿನ್ನು ಬೇಕಾಗಿಲ್ಲ. ಏಕಗವಾಕ್ಷಿ ವ್ಯವಸ್ಥೆಯಲ್ಲಿ ಅನುಮತಿ ನೀಡಲಾಗಿದೆ. ಸಬ್ ಡಿವಿಷನ್ AEE ಗೆ ಕೊಟ್ರೆ ಅವ್ರೇ ಬೆಸ್ಕಾಂ ,ಪೊಲೀಸ್, ಅಗ್ನಿಶಾಮಕ ದಳದ ಅನುಮತಿಯ ನಿರಾಪೇಕ್ಷಣಾ ಪತ್ರವನ್ನು ಕೊಡ್ತಾರೆ.
ಇನ್ನೂ ದೊಡ್ಡ ಗಣೇಶ ವಿಗ್ರಹಗಳ ವಿಸರ್ಜನೆಗೆ ನಾಲ್ಕು ದೊಡ್ಡ ಕಲ್ಯಾಣಿಗಳ ವ್ಯವಸ್ಥೆ ಮಾಡಲಾಗಿದೆ. ಸಣ್ಣ ವಿಗ್ರಹಗಳಿಗೆ ಆಯಾಯ ಸ್ಥಳೀಯವಾಗಿ ಕೆರೆಗಳ ವ್ಯವಸ್ಥೆ ಮಾಡಲಾಗಿದೆ. ಮನೆಗಳಲ್ಲಿಟ್ಟ ಗಣೇಶನನ್ನು ಮನೆಯಲ್ಲಿಯೇ ಬಕೆಟ್ ನೀರಿನಲ್ಲಿ ವಿಸರ್ಜಿಸಬೇಕು. 15 ದಿನಕ್ಕಿಂತ ಹೆಚ್ಚು ದಿನ ಗಣೇಶ ಕೂರಿಸುವಂತಿಲ್ಲ. ಆಗಸ್ಟ್ 31- ರಿಂದ ಸೆಪ್ಟೆಂಬರ್-೧೫ ರವರೆಗೆ ಮಾತ್ರ ಗಣೇಶ ಇಡಲು ಅನುಮತಿ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
PublicNext
20/08/2022 07:12 pm