ಶಿವಾಜಿನಗರ: ಮಹಿಳೆಗೆ ಕಿರುಕುಳ ನೀಡ್ತಿದ್ದ ಆರೋಪಿಯನ್ನ ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ನಾಗರಾಜ್ ಬಂಧಿತ ಆರೋಪಿಯಾಗಿದ್ದು, ಮೈಸೂರಿನಲ್ಲಿ ಮಹಿಳೆಗೆ ಪರಿಚಯ ಆಗಿದ್ದ. ಬಳಿಕ ಫೋನ್ ಮಾಡಿ ತನ್ನ ಜೊತೆಗೆ ಇರುವಂತೆ ಹಿಂಸೆ ನೀಡ್ತಿದ್ದ.
ಅಷ್ಟೇ ಅಲ್ಲದೆ ಪದೇ ಪದೇ ಹಿಂಬಾಲಿಸಿ ಬಂದು ಹಿಂಸೆ ಕೊಡ್ತಿದ್ದ, ಜೊತೆಗೆ ದಿನವೊಂದಕ್ಕೆ ನೂರರಿಂದ ಇನ್ನೂರು ಬಾರಿ ಫೋನ್ ಮಾಡಿ ಟಾರ್ಚರ್ ನೀಡ್ತಿದ್ದ ಎಂದು ಮಹಿಳೆ ಹೈಗ್ರೌಂಡ್ ಠಾಣೆಯಲ್ಲಿ ದೂರು ನೀಡಿದ್ರು. ಮಹಿಳೆ ದೂರಿನ ಅನ್ವಯ ಆರೋಪಿ ನಾಗರಜನನ್ನ ಹೈಗ್ರೌಂಡ್ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ.
Kshetra Samachara
19/09/2022 12:04 pm