ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೆರೆ ಬಂದ ಮನೆಗೆ ಬರೆ ಎಳೆದಂತಾಗಿದೆ ಕಳ್ಳರ ಕೈಚಳಕ

ಬೆಂಗಳೂರು: ಮನೆಗೆ ನೀರು ನುಗ್ಗಿ ರೈನ್ ಬೋ ಲೇಔಟ್ ಜನ ಪರದಾಡ್ತಿದ್ರೆ ಇದನ್ನೆ ಇಲ್ಲೊಂದು ಕಳ್ಳರ ಗುಂಪು ಸದುಪಯೋಗ ಪಡಿಸಿಕೊಂಡಿದೆ. ನೆರೆ ಬಂದ ಮನೆಗೆ ಬರೆ ಎಳೆದಂತೆ ಕಳ್ಳರು ನೀರು ತುಂಬಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.

ಮಳೆಯಿಂದ ಮುಳುಗಡೆಗೊಂಡಿದ್ದ ರೈನ್ ಬೋ ಲೇಔಟ್ ನಲ್ಲಿ ಸರಣಿ ಕಳ್ಳತನವಾಗಿದ್ದು, ಮೂರು ಮನೆಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಇನ್ನು ಮನೆಯಲ್ಲಿದ್ದ ಚಿನ್ನಾಭರಣ ಕಳೆದುಕೊಂಡ ಮನೆಯವರು ಕಳ್ಳರಿಗೆ ಹಿಡಿ ಶಾಪ ಹಾಕಿದ್ದಾರೆ.

ಇನ್ನು ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಮಳೆಯಿಂದಾಗಿ ಇಡೀ ಲೇಔಟ್ ನಲ್ಲಿ ನೀರು ನುಗ್ಗಿ ಜನ ಪರದಾಡುತ್ತಿದ್ದಾರೆ. ಇಡೀ ಲೇಔಟ್ ನಲ್ಲಿ ಕರೆಂಟ್ ಕೂಡ ಇರಲಿಲ್ಲ.

ಸಿಸಿಟಿವಿ ಕೂಡ ವರ್ಕ್ ಆಗ್ತಿರ್ಲಿಲ್ಲ. ಸಾಲದಕ್ಕೆ ಸಾಕಷ್ಟು ಜನ ಮನೆ ಬಿಟ್ಟು ಬೇರೆಡೆ ತಾತ್ಕಾಲಿಕವಾಗಿ ವಾಸವಾಗಿದ್ರು ಇದನ್ನ ಕನ್ಫರ್ಮ್ ಮಾಡಿಕೊಂಡು ಖದೀಮರು ಈ ಕೃತ್ಯವೆಸಗಿದ್ದಾರೆ.ನೀರು ನುಗ್ಗಿ ಕಾಂಪೌಂಡ್ ಕೂಡ ಬಿದ್ದಿದ್ದ ಮನೆಗೆ ಬಂದು ಕಳ್ಳತನ ಮಾಡಿದ್ದಾರೆ. ಮನೆಯವರು ಮನೆಗೆ ವಾಪಸ್ಸು ಬಂದು ನೋಡಿದಾಗ ಕೃತ್ಯ ಬಯಲಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Edited By : Nagesh Gaonkar
PublicNext

PublicNext

12/09/2022 11:22 am

Cinque Terre

33.64 K

Cinque Terre

1

ಸಂಬಂಧಿತ ಸುದ್ದಿ