ಬೆಂಗಳೂರು: ಕಾರ್ ಪಾರ್ಕಿಂಗ್ ಕೆಲಸ ಮಾಡುತಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಪೊಲೀಸರ ಕಿರುಕುಳ ಕಾಣರಣ ಅಂತ ಕುಟಂಬಸ್ಥರು ಆರೋಪಿಸಿದ್ದಾರೆ.
ನೇಣು ಬಿಗಿದುಕೊಂಡು 25 ವರ್ಷದ ಕೀರ್ತಿ ಸಾವನ್ನಪ್ಪಿದ್ದು, ಮಹಾಲಕ್ಷ್ಮಿ ಲೇಔಟ್ ನ ಅಶೋಕ್ ಪುರಂನಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ಸುಬ್ರಮಣ್ಯ ನಗರ ಪೊಲೀಸರೇ ಕಾರಣ ಎಂದು ಪೊಷಕರ ಆರೋಪ ಮಾಡಿದ್ದು, ಖಾಸಗಿ ಕಂಪನಿಯಲ್ಲಿ ಕಾರ್ ಪಾರ್ಕರ್ ಆಗಿ ಕೀರ್ತಿ ಕೆಲಸ ಮಾಡ್ತಿದ್ದ. ಬಂದ ಕಾರ್ ಕೀರ್ತಿ ಪಾರ್ಕಿಂಗ್ ಮಾಡಿದ್ರೆ ಮತ್ತೋರ್ವ ಕಾರ್ ವಾಪಾಸ್ ಮಾಲೀಕರಿಗೆ ತಂದು ಕೊಡುತಿದ್ದ.ಆದರೆ ಮೊನ್ನೆ ಬಂದ ಕಾರ್ ವೊಂದರಲ್ಲಿ ಚಿನ್ನ ಕಳುವಾದ ಸಂಗತಿ ಕೇಳಿ ಬಂದಿತ್ತು. ಈ ವಿಚಾರವಾಗಿ ಕಾರ್ ಮಾಲೀಕ ಪೊಲೀಸರಿಗೆ ದೂರು ನೀಡಿದ್ದ.
ಸುಬ್ರಮಣ್ಯನಗರ ಪೊಲೀಸರು ಕೀರ್ತಿ ಹಾಗೂ ಮತ್ತೊರ್ವನ ಕರೆಸಿ ವಿಚಾರಣೆ ಮಾಡಿ ಕಳುಹಿಸಿದ್ದರು. ಈ ವೇಳೆ ಕೀರ್ತಿಗೆ ಪೊಲೀಸರು ಹಲ್ಲೆ ಮಾಡಿ ಜೈಲಿಗೆ ಹಾಕೊದಾಗಿ ಬೆದರಿಸಿಇಂದು ಮತ್ತೆ ಠಾಣೆಗೆ ಬರುವಂತೆ ಸಹ ಪೊಲೀಸರು ಬೆದರಿಸಿದ್ರಂತೆ. ತಪ್ಪು ಮಾಡದೇ ಇದ್ದರು ಪೊಲೀಸರ ಕಿರುಕುಳ ನೀಡಿದ್ದಾರೆಂದು ಕುಟಂಬಸ್ಥರು ಆರೋಪಿಸಿದ್ದಾರೆ. ಕುಟುಂಬದ ಭವಿಷ್ಯದ ಆತಂಕದಲ್ಲಿ ಕೀರ್ತಿ ಆತ್ಮಹತ್ಯೆಮಾಡಿಕೊಂಡು ಇದೇ ವೇಳೆ ಡೆತ್ ನೋಟ್ ಸಹ ಬರೆದು ಕೀರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಬ್ರಮಣ್ಯನಗರ ಪೊಲೀಸರ ಮತ್ತು ಆತ ಕೆಲಸ ಮಾಡುತಿದ್ದ ಕಂಪನಿಯವರ ಬೇಜಾವಾಬ್ದಾರಿ ಆರೋಪಮಾಡಿ ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
PublicNext
10/09/2022 12:15 pm