ಬೆಂಗಳೂರು: ಕ್ರೈಂ ಮಾಡದಂತೆ ದುಡ್ಡು ಮಾಡೋದು ಅಂದ್ರೆ ಲಿಟಿಗೇಷನ್ ರಿಯಲ್ ಎಸ್ಟೇಟ್ ಕೆಲಸ. ಅದ್ರಲ್ಲೂ ಒಂದಷ್ಟು ವರ್ಷ ನಿಮ್ಮ ಕೈಲಿ ಕಾಸಿಲ್ಲ ಅಂತ ನಿಮ್ಮ ಸೈಟ್ ಖಾಲಿ ಬಿಟ್ಟಿದ್ದರೆ ಆಗಾಗ ಸೈಟ್ ಹತ್ತಿರ ಹೋಗಿ ಚೆಕ್ ಮಾಡ್ತಿರಿ. ಯಾಕಂದ್ರೆ ದಿಕ್ಕುದೆಸೆ ಇಲ್ಲದವರ ಹೆಸರಿಗೆ ನಿಮ್ಮ ಪ್ರಾಪರ್ಟಿ ರಿಜಿಸ್ಟರ್ ಆಗಿಬಿಡುತ್ತದೆ. ಇಲ್ಲೊಂದು ಲ್ಯಾಂಡ್ ಫ್ರಾಡ್ ಗ್ಯಾಂಗ್ ತಗಲ್ಲಾಕ್ಕೊಂಡಿದ್ದು, ಕೆಂಪೇಗೌಡ ನಗರ ಪೊಲೀಸರು ವಂಚಕರ ಕೈಗೆ ಕೋಳ ತೊಡಿಸಿದ್ದಾರೆ.
ಉದಯ್ ಪ್ರತಾಪ್ ಸಿಂಗ್, ಅಯೂಬ್ ಖಾನ್, ಮುರುಳೀಧರ ಅಲಿಯಾಸ್ ಡುಪ್ಲಿಕೇಟ್ ನರಸಯ್ಯ ಅರೆಸ್ಟ್ ಆಗಿದ್ದು, ಆರೋಪಿಗಳು
ಬನಶಂಕರಿಯ ಡಾಕ್ಟರ್ ನರಸಯ್ಯರ ಪ್ರಾಪರ್ಟಿಯನ್ನ ಕಬ್ಜಾ ಮಾಡಿದ್ರು. ಬನಶಂಕರಿಯಲ್ಲಿ ಬಿಡಿಎಯ 60×40 ಜಾಗವನ್ನ ಹೊಂದಿದ್ದ ಡಾಕ್ಟರ್ ನರಸಯ್ಯ ಮನೆ ಕಟ್ಟದೆ ಖಾಲಿ ಬಿಟ್ಟಿದ್ರು. ಜಾಗ ಖಾಲಿ ಇರೋದನ್ನ ತಿಳಿದ ವಂಚಕರು ನಕಲಿ ದಾಖಲೆ ಕ್ರಿಯೇಟ್ ಮಾಡಿದ್ದು, ಆರೋಪಿಗಳ ಪೈಕಿ
ಮಾಸ್ಟರ್ ಮೈಂಡ್ ಉದಯ್ ಪ್ರತಾಪ್ ಸಿಂಗ್ ಹಾಗೂ ಅಯೂಬ್ ಖಾನ್ ನಕಲಿ ನರಸಯ್ಯನನ್ನ ಕ್ರಿಯೇಟ್ ಮಾಡಿದ್ರು. ನರಸಯ್ಯನ ಹೆಸರಲ್ಲಿ ಬಸವೇಶ್ವರ ನಗರದ ಮುರುಳೀಧರ ಎನ್ನುವವನ್ನ ಕರೆತಂದು ಚಾಮರಾಜಪೇಟೆ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿರೋ ಅಸಲೀ ನರಸಯ್ಯನ ದಾಖಲೆಗಳನ್ನ ಪಡೆದಿದ್ರು.ಬಿಡಿಎ ಅಲಾಟ್ ಮೆಂಟ್ ಲೆಟರ್,ಬಿಡಿಎ ರಿಕಿಸ್ಟರ್ ಲೆಟರ್ ರೆಡಿ ಮಾಡಿ ಮಾರಾಟಕ್ಕೆ ಮುಂದಾಗಿದ್ರು.
ಫ್ಲಿಪ್ ಕಾರ್ಟ್ ನಲ್ಲಿ ಕೆಲಸ ಮಾಡ್ತಿದ್ದ ಸುನೀಲ್ ಎಂಬಾತನನ್ನ ಪರ್ಚೇಸರಾಗಿ ಕರೆತಂದು ಪಿಎನ್ ಬಿ ಬ್ಯಾಂಕ್ ನಲ್ಲಿ ಸುನೀಲನ ಸ್ಯಾಲರಿ ಮೇಲೆ 1.40 ಕೋಟಿ ಲೋನ್ ಕೊಡೂ ಕೊಡಿಸಿದ್ರು.ನಂತರ ನಕಲಿ ನರಸಯ್ಯನನ್ನ ಇಟ್ಟುಕೊಂಡು ಸುನೀಲನಿಗೆ ಪ್ರಾಪರ್ಟಿ ರಿಜಿಸ್ಟರ್ ಮಾಡಿ ಹಣ ಪಡೆದು ಕೈತೊಳೆದುಕೊಂಡಿದ್ರು.
ಯಾವಾಗ ಅಸಲಿ ನರಸಯ್ಯ ಪ್ರಾಪರ್ಟಿಯ ಇಸಿಯನ್ನ ತೆಗೆಸ್ತಾರೋ ಆಗ್ಲೇ ಗೊತ್ತಾಗಿತ್ತು ಪ್ರಾಪರ್ಟಿ ಬೇರೆಯವರ ಹೆಸರಿಗೆ ರಿಜಿಸ್ಟರ್ ಆಗಿದೆ ಅಂತಾ ಆಗ ನೇರವಾಗಿ ವಿವಿ ಪುರಂ ಠಾಣೆಗೆ ಬಂದು ನರಸಯ್ಯ ದೂರನ್ನ ನೀಡಿದ್ದರು. ಕೇಸ್ ಕೆಜಿ ನಗರ ಠಾಣೆಗೆ ವರ್ಗಾವಣೆಯಾಗಿದ್ರಿಂದ ಕೆಜಿ ನಗರ ಇನ್ಸ್ ಪೆಕ್ಟರ್ ರಕ್ಷಿತ್ ಟೀಂ ಇದೀಗ ಫ್ರಾಡ್ ಮಾಡಿದ ಟೀಂನನ್ನ ಬಂಧಿಸಿದೆ.
ಆರೋಪಿಗಳ ಪೈಕಿ ಉದಯ್ ಪ್ರತಾಪ್ ಸಿಂಗ್ ಸ್ಥಳೀಯನಾಗಿದ್ದು, ನಾಗ್ಪುರದಲ್ಲೇ ವಾಸವಾಗಿರೋ ಉದಯ್ ಈ ಹಿಂದೆ ಪಾಸ್ ಪೋರ್ಟ್ ಹಗರಣದಲ್ಲೂ ತಗಲ್ಲಾಕ್ಕೊಂಡಿದ್ದ. ಫೇಕ್ ನರಸಯ್ಯನ ಜಾಗದಲ್ಲಿ ಬಂದ ಹಣದಲ್ಲಿ 6 ಲಕ್ಷ ಗುಳುಂ ಮಾಡಿದ್ದ ಆರೋಪಿ ಅಯೂಬ್ ನಕಲಿ ನರಸಯ್ಯ @ ಮುರುಳೀಧರ. ಮೂವರು ಆರೋಪಿಗಳು ಫ್ರಾಡ್ ಆಂಡ್ ಫೋರ್ಜರಿ ಕೇಸ್‌ನಲ್ಲಿ ತಗಲ್ಲಾಕ್ಕೊಂಡಿದ್ದು, ಇವರಿಗೆ ಸಪೋರ್ಟ್ ಮಾಡಿದ
ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆಬೀಸಿದ್ದಾರೆ.
PublicNext
09/09/2022 10:32 pm