ದೊಡ್ಡಬಳ್ಳಾಪುರ: ಹೊಲದಲ್ಲಿ ಹಸು ಮೇಯಿಸುತ್ತಿದ್ದ ವೃದ್ದೆಯ ಕಣ್ಣಿಗೆ ಖಾರದ ಪುಡಿ ಎರಚಿದ ಸರಗಳ್ಳ ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ಕೊಂಡ್ ಪರಾರಿಯಾಗಿದ್ದಾನೆ.
ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲ ಸಮೀಪದ ಖಾನಿಮಠದ ಬಳಿ ನಿನ್ನೆ ಸಂಜೆ ಘಟನೆ ನಡೆದಿದ್ದು, ಕೆಂಪಮ್ಮ ಎಂಬುವರು ತಮ್ಮ ಹೊಲದಲ್ಲಿ ಹಸು ಮೇಯಿಸುತ್ತಿದ್ದ ಸಮಯದಲ್ಲಿ ಬ್ಲ್ಯಾಕ್ ಕಲರ್ ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿ ಆಕೆಯ ಕಣ್ಣಿಗೆ ಖಾರದ ಪುಡಿ ಎರಚಿ ಆಕೆಯ ಕೊರಳಲಿದ್ದ ಮಾಂಗಲ್ಯ ಸರ ಕಿತ್ಕೊಂಡ್ ಪರಾರಿಯಾಗಿದ್ದಾನೆ, 30 ಗ್ರಾಂ ತೂಕದ ಮಾಂಗಲ್ಯ ಸರವಾಗಿದೆ, ದೊಡ್ಡಬೆಳವಂಗಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
09/09/2022 12:47 pm