ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ನಕಲಿ ಮೆಸೇಜ್ ತೋರಿಸಿ ಚಿನ್ನದಂಗಡಿ ಮಾಲೀಕನಿಗೆ ವಂಚನೆ

ಬೆಂಗಳೂರು: ಚಿನ್ನ ಖರೀದಿಸಿದ ಗ್ರಾಹಕನೊಬ್ಬ ಆನ್‌ಲೈನ್ ನಲ್ಲಿ ಹಣ ವರ್ಗಾವಣೆ ಆಗಿದೆ ಎಂದು ನಕಲಿ ಮೆಸೇಜ್ ತೋರಿಸಿ ವಂಚಿಸಿ ಪರಾರಿಯಾದ ಘಟನೆ ಮಾಗಡಿ ರಸ್ತೆಯ ಮಹಾವೀರ್ ಜ್ಯುವೆಲ್ಲರ್ಸ್ ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜುಲೈ 19ರಂದು ಜ್ಯುವೆಲ್ಲರಿ ಶಾಪ್ ಗೆ ಬಂದಿದ್ದ ಕಾರ್ತಿಕ್ ಎಂಬಾತ ಹತ್ತೊಂಬತ್ತು ಸಾವಿರ ರೂ. ಮೌಲ್ಯದ ಚಿನ್ನದ ಉಂಗುರ ಖರೀದಿಸಿದ್ದ. ಈ ವೇಳೆ ಅಂಗಡಿಯಲ್ಲಿದ್ದ ವಯಸ್ಸಾದ ಪಾರಸ್ಮಾಲ್ ಎಂಬುವವರಿಗೆ ಆನ್‌ಲೈನ್ ನಲ್ಲಿ ಹಣ ವರ್ಗಾವಣೆ ಮಾಡಿರುವುದಾಗಿ ತಾನೇ ಆನ್ಲೈಲನ್ ಮೂಲಕ ನಕಲಿ ನೋಟಿಫಿಕೇಶನ್ ಮೆಸೇಜ್ ಕಳಿಸಿ ನಿಧಾನವಾಗಿ ಕಾಲ್ಕಿತ್ತಿದ್ದ. ತಿಂಗಳ ಕೊನೆಯಲ್ಲಿ ಹಣದ ಲೆಕ್ಕಾಚಾರ ಹಾಕುವಾಗ ವ್ಯತ್ಯಾಸ ಗೊತ್ತಾಗಿ ಅಂಗಡಿ ಸಿಸಿಟಿವಿ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ವಿರುದ್ಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿಟಿವಿ ದೃಶ್ಯಗಳನ್ನಾಧರಿಸಿ ತನಿಖೆ ನಡೆಸಲಾಗುತ್ತಿದೆ.

Edited By : Manjunath H D
PublicNext

PublicNext

08/09/2022 02:25 pm

Cinque Terre

25.7 K

Cinque Terre

0

ಸಂಬಂಧಿತ ಸುದ್ದಿ