ಬೆಂಗಳೂರು: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಲ್ಲುಬಾಳು ಗ್ರಾಮ ಪಂಚಾಯಿತಿ ಕೊನಸಂದ್ರ ಸಿಡಿ ಮ್ಯಾಕ್ಸ್ ಎಂಬ ಖಾಸಗಿ ಕಂಪನಿ, ಕೆಮಿಕಲ್ ನೀರನ್ನು ಕೆರೆಗೆ ಬಿಡಲಾಗುತ್ತಿದೆ ಎಂದು ಪಬ್ಲಿಕ್ ನೆಕ್ಸ್ಟ್‌ನಲ್ಲಿ ಪ್ರಸಾರ ಮಾಡಲಾಗಿತ್ತು. ಈ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಸ್ಟೇಲೆನ್ಸ್ ಫಾರ್ಮ ಕಂಪನಿ ಕೈಗಾರಿಕಾ ವ್ಯಾಜ್ಯ ಮತ್ತು ರಾಸಾಯನಿಕ ಕಲುಷಿತ ನೀರನ್ನು ಕೆರೆಗಳಿವೆ ರಾಜರೋಷವಾಗಿ ಚರಂಡಿಯ ಮೂಲಕ ಕೆರೆಗೆ ಆರಿಸಲಾಗ್ತಿದೆ. ಇನ್ನು ಸ್ಟೇಲೆನ್ಸ್ ಖಾಸಗಿ ಒಡೆತನದ ಕಂಪನಿ ಮಳೆ ನೀರಿನ ಮೂಲಕ ಕೆರೆಗೆ ಬಿಡಲಾಗುತ್ತೆ ಅಂತ ಅಲ್ಲಿನ ಗ್ರಾಮಸ್ಥರು ಮಾಹಿತಿ ನೀಡಿದರು.
ಇನ್ನು ಆನೇಕಲ್ ತಾಲೂಕಿನ ಜಿಗಿಣಿ ಕೈಗಾರಿಕಾ ಪ್ರದೇಶದಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿರ್ವಹಣ ಮಂಡಳಿ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಪರಿಶೀಲನೆ ವೇಳೆ ಕೆರೆಗಳಿಗೆ ಕಲುಷಿತ ನೀರು ಬಿಡುವುದು ಖಚಿತವಾಗಿದೆ. ಇನ್ನು ಪರಿಸರ ಮಾಲಿನ್ಯ ಖಾಸಗಿ ಕಂಪನಿಗಳ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.
PublicNext
01/09/2022 08:07 am