ಬೆಂಗಳೂರು: ಒಂದು ಕಡೆ ಗಣೇಶ ಚತುರ್ಥಿ ಇನ್ನೊಂದು ಕಡೆ ಬಿಬಿಎಂಪಿ ಚುನಾವಣೆ ಸಮೀಪಿಸ್ತಿರೋ ಹಿನ್ನೆಲೆಯಲ್ಲಿ ಕೆಲ ರೌಡಿ ಶೀಟರ್ ಗಳು ಇದನ್ನೇ ನೆಪವಾಗಿಟ್ಟುಕೊಂಡು ಬಾಲಬಿಚ್ಚಲು ಮುಂದಾಗಿದ್ದಾರೆ.
ಸದ್ಯ ಇದಕ್ಕೆ ಬ್ರೇಕ್ ಹಾಕಲು ಪಶ್ಚಿಮ ವಿಭಾಗ ಪೊಲೀಸ್ರು ಮುಂದಾಗಿದ್ದು, ಬೆಳಂಬೆಳಿಗ್ಗೆ ರೌಡಿ ಆಸಾಮಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಪಶ್ಚಿಮ ವಿಭಾಗದ ಮೂರು ಉಪ ವಿಭಾಗದಲ್ಲಿ ರೌಡಿ ಶೀಟರ್ ಮನೆ ಮೇಲೆ ದಾಳಿ ನಡೆಸಿದ್ದು, ಸುಮಾರು 160 ಜನರ ಮನೆ ಮೇಲೆ ದಾಳಿ ಮಾಡಲಾಗಿದ್ದು ಅದರಲ್ಲಿ 100 ಜನ ಪತ್ತೆಯಾಗಿದ್ದಾರೆ. ಇನ್ನು 60 ಜನ ನಾಪತ್ತೆಯಾಗಿದ್ದು,ಎರಡ್ಮೂರು ತಿಂಗಳಿನಿಂದ ಅವರ ಮೇಲೆ ನಿಗಾ ಇಟ್ಟು ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಈ ಪೈಕಿ ಆಕ್ಟೀವ್ ಆಗಿದ್ದ 32 ರೌಡಿಗಳನ್ನ ಕರೆತಂದು ಬಾಂಡ್ ಓವರ್ ಮಾಡಿಸಿ ಪ್ರಿವೆನ್ಷನ್ ಆಕ್ಟ್ ನಡಿ ಕೇಸ್ ದಾಖಲಿಸಿಲಾಗಿದೆ.
ಈ ದಾಳಿ ವೇಳೆ ಹಲವು ದಿನಗಳಿಂದ ತಲೆ ಮರೆಸಿಕೊಂಡಿದ್ದ ಮೂವರು ಪ್ರಮುಖ ರೌಡಿಗಳು ಸಿಕ್ಕಿಬಿದ್ದಿದ್ದು, ಸೈಯದ್ ಅಜ್ಘರ್ , ವಿಜಯನಗರ ಪೊಲೀಸ್ ಠಾಣೆಯ ರೌಡಿ ಶೀಟರ್ ಈತನ ಮೇಲೆ 14 ಪ್ರಕರಣ ದಾಖಲಾಗಿತ್ತು, 10 ತಿಂಗಳಿನಿಂದ ತಲೆ ಮರೆಸಿಕೊಂಡಿದ್ದು, ಆರ್ ಆರ್ ನಗರ ಕೇಶವ್ ಎಂಬಾತ ತಲಾ ಐದು ಪ್ರಕರಣ ದಾಖಲಾಗಿತ್ತು, ಕೋರ್ಟ್ ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಮತ್ತೊಬ್ಬ
ಜಿಬ್ರಾನ್ @ಚೈನಾ ಈಗಾಗಲೆ ಗೂಂಡಾ ಆಕ್ಟಿವಿಟೀಸ್ ಹಿನ್ನಲೆ,ಇತ್ತೀಚೆಗೆ ಹೊರ ಬಂದಿದ್ದ . ಈತನ ಮನೆಯಲ್ಲಿ ಡ್ರಾಗರ್ ಇಟ್ಟುಕೊಂಡಿದ್ದ ಸದ್ಯ ಅದನ್ನು ಸೀಝ್ ಮಾಡಲಾಗಿದೆ ಹಾಗು ಆತನ ಮೇಲೆ ಆರ್ಮ್ಸ್ ಆಕ್ಟ್ ನಡಿ ಪ್ರಕರಣ ದಾಖಲಿಸಿರೋದಾಗಿ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ .
PublicNext
24/08/2022 05:11 pm