ಹೊಸಕೋಟೆ : ಹೊಸಕೋಟೆಯಲ್ಲಿ ಕಾರಿನ ಗ್ಲಾಸ್ ಹೊಡೆದು ಡ್ಯಾಶ್ ಬೋರ್ಡ್ ನಲ್ಲಿದ್ದ ಮೂರು ಲಕ್ಷ ಹಣವನ್ನ ಕತರ್ನಾಕ್ ಕಳ್ಳರು ಎಗರಿಸಿ ಎಸ್ಕೇಪ್ ಆಗಿದ್ದಾರೆ.
ಹೊಸಕೋಟೆಯ ಓಲ್ಡ್ ಬಸ್ ಸ್ಟಾಂಡ್ ಬಳಿಯ ತಾಲೂಕು ಕಚೇರಿ ಮುಂಭಾಗದಲ್ಲಿ ಈ ಘಟನೆ ನಡೆದಿದೆ.ಬೇಗೂರು ಮೂಲದ ಹರೀಶ್ ಎಂಬ ವ್ಯಕ್ತಿ ಹಣ ಕಳೆದುಕೊಂಡಿದ್ದಾನೆ. ಕಾರ್ ನಿಲ್ಲಿಸಿ ಆಸ್ಪತ್ರೆಗೆ ಹೋಗಿ ಬರುವುದರೊಳಗೆ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.ಇನ್ನು ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Kshetra Samachara
24/08/2022 04:07 pm