ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಪತಿಯೇ ಬರ್ಬರವಾಗಿ ಕೊಲೆಮಾಡಿರುವ ಘಟನೆ ಕೆ ಆರ್ ಪುರದ ಟಿಸಿ ಪಾಳ್ಯದಲ್ಲಿ ನಡೆದಿದೆ.
ಇನ್ನು ಪಾಪಿ ಪತಿ ಜಾನ್ ಸುಪ್ರಿತ್ ಪತ್ನಿ ನ್ಯಾನ್ಸಿಪ್ಲೋರಳನ್ನ ಮನೆಯಲ್ಲಿಯೇ ಚಾಕುವಿನಿಂದ ಕತ್ತು ಸೀಳಿ ಭೀಕರವಾಗಿ ಕೊಲೆಮಾಡಿದ್ದಾನೆ.
ಖಾಸಗಿ ಕಂಪನಿಯಲ್ಲಿ ಜಾನ್ ಕೆಲ್ಸ ಮಾಡ್ತಿದ್ರೆ, ನ್ಯಾನ್ಸಿ ಗೃಹಿಣಿಯಾಗಿದ್ಳು. ಪತ್ನಿ ಬೇರೊಬ್ಬನ ಜೊತೆಗೆ ಸ್ನೇಹ ಬೆಳೆಸಿದಳು. ಅಂತ ಈ ಹಿಂದೆ ಮನೆಯಲ್ಲಿ ಗಲಾಟೆ ಮಾಡಿದ್ರು.
ಇಂದು ಜಗಳ ಅತೀರೇಖಗೊಂಡು ಚಾಕುವಿನಿಂದ ನ್ಯಾನ್ಸಿ ಕುತ್ತಿಗೆ ಇರಿದಿದ್ದಾನೆ. ಇದ್ರಿಂದ ತೀವ್ರ ರಕ್ತ ಸ್ರಾವವಾಗಿ ಪತ್ನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.ಆರೋಪಿ ಪತಿ ಜಾನ್ ಸುಪ್ರಿತ್ ನನ್ನು ಕೆ ಆರ್ ಪುರಂ ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
PublicNext
23/08/2022 10:11 pm