ಬೆಂಗಳೂರು: ಬಾಲಕಿಗೆ ಚಾಕು ಇರಿದು ತಾನೂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಜಿಂದಾಲ್ ಕ್ವಾರ್ಟರ್ಸ್ನಲ್ಲಿ ನಡೆದಿದೆ.
ಹೀಗೆ ಜಿಂದಾಲ್ ಕಂಪನಿ ನೌಕರರ ಕ್ವಾಟ್ರರ್ಸ್ ಮನೆಯೊಂದ ಆವರಣದ ತುಂಬೆಲ್ಲಾ ಚೆಲ್ಲಾಡಿರೋ ರಕ್ತ, ಸ್ಥಳದಲ್ಲಿ ಪೊಲೀಸ್ರಿಂದ ಪರಿಶೀಲನೆ, ಶವಾಗಾರದಲ್ಲಿ ಶವವಾಗಿ ಮಲಗಿರೋ ಪುಟ್ಟ ಬಾಲಕಿ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿಂದಾಲ್ ನಗರದಲ್ಲಿ.
ಹೌದು. ಜಿಂದಾಲ್ ಅಲ್ಯೂಮಿನಿಯಂ ಕಂಪನಿಯ ನೌಕರ ಕ್ವಾಟ್ರರ್ಸ್‌ನ ವಾಸಿ ಲಕ್ಷ್ಮಣಸಿಂಗ್ ಮಗಳು 11 ವರ್ಷದ ಬಾಲಕಿ ಖುಷಿಯನ್ನ ಇದೇ ಕ್ವಾಟ್ರರ್ಸ್‌ನ ನಿವಾಸಿ ನಂದಕಿಶೋರ್ ಎಂಬಾತ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಆರೋಪಿ ನಂದಕಿಶೋರ್ ಜಿಂದಾಲ್‌ನ ದಾಬಸ್‌ಪೇಟೆ ಕ್ಯಾಂಪ್‌ನಲ್ಲಿ ಕೆಲಸ ಮಾಡ್ತಿದ್ರೆ, ಮೃತ ಬಾಲಕಿ ಖುಷಿ ತಂದೆ ಲಕ್ಷ್ಮಣ್ ಸಿಂಗ್ ಚಿಕ್ಕಬಿದಿರಕಲ್ಲು ಕ್ಯಾಂಪಸ್‌ನಲ್ಲಿ ಕೆಲಸ ಮಾಡ್ತಿದ್ರಂತೆ. ಮೃತ ಖುಷಿ ಆಕ್ಟೀವ್ ಆಗಿದ್ದ ಬಾಲಕಿಯಾಗಿದ್ದು ಕ್ವಾಟ್ರರ್ಸ್‌ನ 2ನೇ ಮಹಡಿಯಲ್ಲಿ ವಾಸ ಮಾಡುತ್ತಿದ್ರು. ಇತ್ತ ಆರೋಪಿ ನಂದಕಿಶೋರ್ ಮೊದಲ ಮಹಡಿಯ ಮೆಟ್ಟಿಲ ಪಕ್ಕದ ಮನೆಯಲ್ಲಿ ವಾಸ ಮಾಡುತ್ತಿದ್ದು, ಖುಷಿ ಆಗಾಗ ಮಹಡಿ ಮೇಲಿಂದ ಕೆಳಗೆ ಓಡಾಡುತ್ತಿದ್ದಾಗ ಅಸಭ್ಯವಾಗಿ ನಡವಳಿಕೆ ತೋರಿತ್ತಿದ್ನಂತೆ. ಇಲ್ಲಿ ಆಟ ಆಡಬೇಡ ಅಂತ ಸೈಕೋ ರೀತಿ ನಡೆದ್ಕೊಳ್ಳುತ್ತಿದ್ನಂತೆ. ಈ ವಿಚಾರವಾಗಿ ಖುಷಿ ತನ್ನ ತಂದೆಗೆ ಹೇಳಿದ್ದಳಂತೆ. ಖುಷಿ ತಂದೆ ಲಕ್ಷ್ಮಣ್ ಸಿಂಗ್ ಹಾಗೂ ಆರೋಪಿ ನಂದಕಿಶೋರ್ ನಡುವೆ ಗಲಾಟೆ ಸಹ ನಡೆದು ಅಸೋಸಿಯೇಷನ್‌ಗೆ ಕಂಪ್ಲೆಂಟ್ ಕೊಟ್ಟು ಅಸೋಷಿಯೇಷನ್‌ನಿಂದ ಮನೆ ಖಾಲಿ ಮಾಡುವಂತೆ ಸೂಚನೆ ನೀಡಿದ್ದರಂತೆ. ಹೀಗಾಗಿ ಇಷ್ಟೆಲ್ಲಾ ಅವಗಡಕ್ಕೆ ಬಾಲಕಿಯೇ ಕಾರಣ ಎಂದು ಆರೋಪಿ ಇಂದು ಮಧ್ಯಾಹ್ನ ಬಾಲಕಿಗೆ ಮನಸೋ ಇಚ್ಛೆ ಚಾಕುವಿನಿಂದ ಇರಿದು ಕೊಲೆಗೈದು ತಾನೂ ಚಾಕುವಿನಿಂದ ಇರಿದ್ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ಮಾದನಾಯಾನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಮಕ್ಕಳ ಆಟಾಟೋಪದ ವಿಷಯಕ್ಕೆ ಇಬ್ಬರ ಹೆಣ ಬಿದ್ದುರುವುದು ನಿಜಕ್ಕೂ ವಿಪರ್ಯಾಸವೇ ಸರಿ..
PublicNext
22/08/2022 12:23 pm