ಬೆಂಗಳೂರು: ವಿದ್ಯಾರ್ಥಿಯೊಬ್ಬ ತಾನು ವ್ಯಾಸಂಗ ಮಾಡ್ತಿದ್ದ ಕಾಲೇಜಿನ ಪಕ್ಕದಲ್ಲೆ ಕೊಲೆಯಾಗಿದ್ದಾನೆ. ಈ ಘಟನೆ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 18 ವರ್ಷದ ಅರಬಾಜ್ ಎಂಬ ವಿದ್ಯಾರ್ಥಿಯನ್ನ ಚಾಕು ಇರಿದು ಹತ್ಯೆ ಮಾಡಲಾಗಿದೆ.ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಇದೇ ಕಾಲೇಜಿನಿಂದ ಕೆಳಗೆ ಬಂದಿದ್ದ ವಿದ್ಯಾರ್ಥಿ ಇದ್ದಕ್ಕಿದ್ದಂತೆ ಚಾಕು ಇರಿತದಿಂದ ರಕ್ತ ಸ್ರಾವವಾಗಿ ಒದ್ದಾಡ್ತಿದ್ದ. ಆತನನ್ನ ನೋಡಿದ್ದ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಆಸ್ಪತ್ರೆಗೆ ಹೋಗೋವಷ್ಟರಲ್ಲೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಮೃತ ಅರ್ಬಜ್ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡ್ತಿದ್ದು ನಿನ್ನೆ ಕ್ಷುಲ್ಲಕ ವಿಚಾರಕ್ಕೆ ಅರಬಾಜ್ ಹಾಗೂ ಆತನ ಸ್ನೇಹಿತರು ಮತ್ತು ಬೇರೆ ಸ್ಟೂಡೆಂಟ್ಸ್ ಮಧ್ಯೆ ಜಗಳವಾಗಿತ್ತು. ಎಂದಿನಂತೆ ಇಂದು ಮತ್ತೆ ಕಾಲೇಜಿಗೆ ಬಂದಿದ್ದ ಅರ್ಬಜ್ ಮಧ್ಯಾಹ್ನದ ನಮಾಜ್ ಮುಗಿಸಿಕೊಂಡು ಕಾಲೇಜ್‌ನ ಮೂರನೇ ಫ್ಲೋರ್‌ನಲ್ಲಿ ಇದ್ದನಂತೆ. ಈ ವೇಳೆ ಕರೆ ಮಾಡಿ ಕೆಳಗೆ ಕರೆದಿದ್ದ ಹಂತಕರು ಅಲ್ಲಿಂದ 50 ಮೀಟರ್ ದೂರ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ಕೆ.ಜಿ ಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
PublicNext
13/08/2022 07:58 am