ಬೆಂಗಳೂರು: ಅವರಿಬ್ರು ಕುಚಿಕುಗಳು. ಸಣ್ಣ ವಿಚಾರಕ್ಕೆ ಮುನಿಸಿಕೊಂಡು ಏರಿಯಾದಿಂದ ದೂರಾಗಿದ್ರು. ತಡರಾತ್ರಿ ಮತ್ತೇ ಏರಿಯಾಗೆ ಬಂದಿದ್ದ ಸ್ನೇಹಿತನನ್ನ ನೋಡಿ ಮತ್ತೊಬ್ಬ ಮತ್ತೆ ನಮ್ಮ ಏರಿಯಾಗೆ ಬಂದಿದ್ಯಾ? ಅಂತ ಖ್ಯಾತೆ ತೆಗೆದಿದ್ದ. ಈ ಸಮಯದಲ್ಲಿ ಗಲಾಟೆ ತಾರಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ.
ಈ ಘಟನೆ ತಡರಾತ್ರಿ ಅಶೋಕನಗರ ಠಾಣಾ ವ್ಯಾಪ್ತಿಯ ಆನೆಪಾಳ್ಯದಲ್ಲಿ ನಡೆದಿದೆ. ಖಾಸಿಂ ಆರೋಪಿಯಾಗಿದ್ದು ಇರ್ಫಾನ್ ಮೃತ ಯುವಕನಾಗಿದ್ದಾನೆ.ಇರ್ಫಾನ್ ಹಾಗೂ ಖಾಸಿಂ ಸ್ನೇಹಿತರಾಗಿದ್ದು ಈ ಹಿಂದೆ ಪರಸ್ಪರ ಭಿನ್ನಾಭಿಪ್ರಾಯದಿಂದ ದುಶ್ಮನ್ ಗಳಾಗಿದ್ದರು. ನಿನ್ನೆ ರಾತ್ರಿ 1 ಗಂಟೆ ವೇಳೆಗೆ ಇರ್ಫಾನ್ ತನ್ನ ಸ್ನೇಹಿತರ ಜೊತೆಗಿದ್ದಾಗ ಆರೋಪಿ ಖಾಸಿಂ ಆನೆಪಾಳ್ಯಕ್ಕೆ ಬಂದಿದ್ದ. ಈ ವೇಳೆ 'ನಮ್ಮ ಏರಿಯಾಗೆ ಯಾಕೆ ಬಂದೆ?' ಎಂದು ಇರ್ಫಾನ್ ಗಲಾಟೆ ಆರಂಭಿಸಿದ್ದ. ಪರಸ್ಪರ ಜಗಳ ತಾರಕಕ್ಕೇರಿದಾಗ ಇರ್ಫಾನ್ ತನ್ನ ಬಳಿಯಿದ್ದ ಚಾಕುವಿನಿಂದ ಖಾಸಿಂನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಇದೇ ವೇಳೆ ಚಾಕು ತೆಗೆದುಕೊಂಡ ಖಾಸಿಂ, ಇರ್ಫಾನ್ ನ ಬಲತೊಡೆಗೆ ಬಲವಾಗಿ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಇರ್ಫಾನ್ ನನ್ನ ಸ್ಥಳಿಯರು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಇರ್ಫಾನ್ ಮೃತಪಟ್ಟಿದ್ದಾನೆ.
ಇಬ್ಬರೂ ಸಹ ಈ ಹಿಂದೆ ಎಲೆಕ್ಟ್ರಿಕ್ ಕೆಲಸ ಮಾಡ್ತಿದ್ದು ಸದ್ಯ ಆರೋಪಿ ಖಾಸಿಂನನ್ನ ಬಂಧಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.
Kshetra Samachara
30/07/2022 07:30 pm