ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾತ್ರಿ ಹೊತ್ತು ಮನೆಯಿಂದಾಚೆ ಬರಲು ಭಯಪಡುತ್ತಿದ್ದಾರೆ ಸಿಲಿಕಾನ್ ಸಿಟಿ ಮಂದಿ...!

ವರದಿ- ಗಣೇಶ್ ಹೆಗಡೆ

ಬೆಂಗಳೂರು- ಸಿಲಿಕಾನ್ಸಿಟಿಯಲ್ಲಿ ಕತ್ತಲಾಯ್ತು ಎಂದಾಕ್ಷಣ ಬೀದಿ ನಾಯಿಗಳ ಅಬ್ಬರ ಜೋರಾಗುತ್ತಿರುವ ಘಟನೆ ಹೆಚ್ಚಾಗಿವೆ. ಅದರಲ್ಲೂ ನಿತ್ಯ70 ಕ್ಕೂ ಹೆಚ್ಚು ಮಂದಿಗೆ ನಾಯಿ ಕಡಿತ ಪ್ರಕರಣ ಬೆಳಕಿಗೆ ಬರ್ತಿರೋದು ಬಿಬಿಎಂಪಿ ಆತಂಕ ಸೃಷ್ಟಿಸಿದೆ.

ಕಳೆದ ಆರು ತಿಂಗಳಲ್ಲಿ 15 ಸಾವಿರ ಕ್ಕೂ ಜನರ ಮೇಲೆ ಸ್ಟ್ರೀಟ್ ಡಾಗ್ಸ್ ಅಟ್ಯಾಕ್ ಮಾಡಿದೆ. ಇದರಿಂದ ವೃದ್ದರು, ಮಕ್ಕಳು, ಮನೆಯಿಂದ ಹೊರ ಬರಲು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಾಲಿಕೆಯ ಪಶುಪಾಲನಾ ವಿಭಾಗದ ಮಾಹಿತಿಯಂತೆ ನಗರದಲ್ಲಿ 3 ಲಕ್ಷಕ್ಕೂ ಹೆಚ್ಚು ನಾಯಿಗಳಿವೆ. ಅವುಗಳಲ್ಲಿ ಈವರೆಗೆ ಶೇ.70ರಷ್ಟುನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ (ಅನಿಮಲ್ ಬಥ್ರ್ ಕಂಟ್ರೋಲ್-ಎಬಿಸಿ) ಮಾಡಲಾಗಿದೆ. ಇನ್ನೂ ಶೇ.30ರಷ್ಟುನಾಯಿಗಳಿಗೆ ಎಬಿಸಿ ಮಾಡಿಲ್ಲ. ಹಾಗಾಗಿ ಎಬಿಸಿಗೆ ಒಳಗಾಗದ ನಾಯಿಗಳಿಂದ ಬೆಂಗಳೂರಿನ ಬಹುತೇಕ ವಾರ್ಡ್ ಗಳಲ್ಲಿ ನಾಯಿಗಳ ಸಂತತಿ ಹೆಚ್ಚುತ್ತಿದೆ. ಆದರೂ ಸಂಪೂರ್ಣವಾಗಿ ನಾಯಿ ಸಂತತಿ ನಿಯಂತ್ರಿಸುವುದು ಕಷ್ಟಎಂಬುದು ಪಶುಪಾಲನಾ ವಿಭಾಗದ ಅಳಲು.

ಎಂಟು ವಲಯಗಳಲ್ಲಿ ನಿತ್ಯ 800 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಗುರಿಯನ್ನು ಈ ಹಿಂದೆ ನೀಡಲಾಗಿತ್ತು. ಇದೀಗ ನಿತ್ಯ 160ರಿಂದ 200 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಪ್ರತಿ ನಾಯಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು .1200 ಖರ್ಚು ಮಾಡಲಾಗುತ್ತಿದೆ. ಆದರೆ ನಾಯಿಗಳ ಸಂತಾನ ಮಾತ್ರ ನಿಯಂತ್ರಣಕ್ಕೆ ಬರದಿರುವುದು ಬಿಬಿಎಂಪಿ ತಲೆ ನೋವಿಗೆ ಕಾರಣವಾಗಿದೆ.

2022ರಿಂದ ಈವರೆಗೆ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಹೀಗಿದೆ. ಜನವರಿ - 1677, ಫೆಬ್ರವರಿ - 1135, ಮಾರ್ಚ್- 1800, ಏಪ್ರಿಲ್- 1677, ಮೇ- 1841, ಜೂನ್- 1140, ಜುಲೈ- 483 ಜನರಿಗೆ ನಾಯಿ ಕಡಿದಿದೆ.

Edited By : Nirmala Aralikatti
PublicNext

PublicNext

25/07/2022 09:54 am

Cinque Terre

12.22 K

Cinque Terre

1