ಬೆಂಗಳೂರು: ಪ್ರಾಮಾಣಿಕ ಸೆಕ್ಯೂರಿಟಿ ಕೆಲಸ ವ್ಯಕ್ತಿಯೊಬ್ಬರ ಪ್ರಾಣಕ್ಕೆ ಮುಳುವಾಗಿದೆ. ಸೆಕ್ಯುರಿಟಿ ಕಾರ್ಯ ನಿರ್ವಹಿಸುತ್ತಿದ್ದ ಅಪಾರ್ಟ್ ಮೆಂಟ್ ಗೆ ಕಳ್ಳ ಬಂದಿದ್ದಾನೆ ಎಂದು ಭಾವಿಸಿದ ಸೆಕ್ಯುರಿಟಿ ಸಿಬ್ಬಂದಿ ಕಬ್ಬಿಣದ ರಾಡ್‌ನಿಂದ ಹೊಡೆದ ಪರಿಣಾಮ ಬ್ಯಾಂಕ್ ಉದ್ಯೋಗಿಯ ಪ್ರಾಣಪಕ್ಷಿಯೇ ಹಾರಿಹೋಗಿದೆ.
ಹೆಚ್‌ಎಎಲ್‌ನ ಆನಂದ ನಗರದ ವಂಶಿ ಸಿಟಾಡೆಲ್ ಅಪಾರ್ಟ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿಗಾರ್ಡ್
ಶ್ಯಾಮನಾಥ್ ರೀ ಹಾಗೂ ಸ್ನೇಹಿತ ಅಜೀತ್ ಮುರಾ ಎಂಬುವರಿಂದ ಇದೇ ತಿಂಗಳು 4ರಂದು ಕೃತ್ಯ ಎಸಗಿದ್ದು ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.
ಕೆಲ ವರ್ಷಗಳಿಂದ ಅಪಾರ್ಟ್ ಮೆಂಟ್ ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಗಾರ್ಡ್, ಇದೇ ತಿಂಗಳು 5ರಂದು ಮಧ್ಯರಾತ್ರಿ ಅಪರಿಚಿತ ಗೋಡೆ ಹಾರಿ ಅತಿಕ್ರಮಣ ಪ್ರವೇಶಿಸಿದ್ದ. ಇದನ್ನು ಗಮನಿಸಿ ಕಾರ್ಯಪ್ರವೃತ್ತರಾದ ಶ್ಯಾಮ್ ನಾಥ್ ಹತ್ತಿರಕ್ಕೆ ಹೋಗಿ ಪ್ರಶ್ನಿಸಿದ್ದಾನೆ. ಮದ್ಯದ ಗುಂಗಿನಲ್ಲಿದ್ದ ಉದ್ಯೋಗಿ ಸೆಕ್ಯೂರಿಟಿ ಗಾರ್ಡ್ ಪ್ರಶ್ನೆಗೆ ಉತ್ತರಿಸಿದೆ ಮನೆಗೆ ನುಗ್ಗಲು ಪ್ರಯತ್ನಿಸಿದ್ದ. ಈತನ ನಡವಳಿಕೆ ಕಂಡು ಕಳ್ಳ ಎಂದು ಭಾವಿಸಿ ರಾಡ್ ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ.ಇದಕ್ಕೆ ಅಜೀತ್ ಸಹ ಸಾಥ್ ನೀಡಿದ್ದ. ರಾಡ್ ನಿಂದ ಹೊಡೆದ ಏಟಿಗೆ ಸ್ಥಳದಲ್ಲೇ ಕುಸಿದ್ದುಬಿದ್ದು ಸಾವನ್ನಪ್ಪಿದ್ದಾನೆ. ಮಾಹಿತಿ ಅರಿತು ಪೊಲೀಸರು ಸ್ಥಳಕ್ಕೆ ಪರಿಶೀಲಿಸಿ ಪ್ರಶ್ನಿಸಿದಾಗ ಕೆಲಸ ಹೋಗುವ ಭೀತಿಯಿಂದ ಹೊಡೆದಿದ್ದೆ ಎಂದು ಶ್ಯಾಮ್ ನಾಥ್ ಹೇಳಿಕೆ ನೀಡಿದ್ದಾನೆ.
ಕೊಲೆಯಾದ ಅಪರಿಚಿತ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದ ಪೊಲೀಸರು ಈತನ ಹಿನ್ನೆಲೆ ಬಗ್ಗೆ ತನಿಖೆ ನಡೆಸಿದಾಗ ಅಪಾರ್ಟ್ ಮೆಂಟ್ ಗೆ ಈತ ಕಳ್ಳತನಕ್ಕೆ ಬಂದಿರಲಿಲ್ಲ. ವಿಳಾಸ ತಪ್ಪಿ ಬಂದಿರುವುದನ್ನು ಕಂಡುಕೊಂಡಿದ್ದಾರೆ. ಒಡಿಶಾ ಮೂಲದ ಮೃತ ಯುವಕ ಬ್ಯಾಂಕ್ ವೊಂದರ ಸಿಬ್ಬಂದಿಯಾಗಿದ್ದು ತರಬೇತಿಯಾಗಿ ಬೆಂಗಳೂರಿಗೆ ಬಂದಿದ್ದ. ಬಂದ ಮೊದಲ ದಿನದಲ್ಲೇ ಸ್ನೇಹಿತರೊಂದಿಗೆ ಎಣ್ಣೆಪಾರ್ಟಿ ಮಾಡಿದ್ದ. ಕುಡಿದ ಗುಂಗಿನಲ್ಲೇ ಸ್ನೇಹಿತನ ಮನೆ ವಿಳಾಸ ಕನ್ ಪ್ಯೂಸ್ ಮಾಡಿಕೊಂಡಿದ್ದಾನೆ. ಮೊಬೈಲ್ ಸಹ ಸ್ವಿಚ್ ಅಫ್ ಅಗಿದ್ದರಿಂದ ದಾರಿ ತಪ್ಪಿ ತಾನು ವಾಸ ಮಾಡಿಕೊಂಡಿದ್ದ ಅಪಾರ್ಟ್ ಮೆಂಟ್ ಎಂದು ಭಾವಿಸಿ ಎಂಟ್ರಿ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
10/07/2022 05:16 pm