ಬೆಂಗಳೂರು: ಈ ಫೋಟೋದಲ್ಲಿರೋ ಈ 4 ಜನ್ರ ಮುಖವನ್ನೊಮ್ಮೆ ಸರಿಯಾಗಿ ನೋಡಿ, ಯಾಸೀನ್ ಷರೀಫ್, ಅಸ್ಲಾಂ, ಅಕ್ಬರ್ ಹಾಗೂ ರಫೀಕ್ ಅಂತ, ಈ ನಾಲ್ವರು ಐನಾತಿಗಳು ಈಗ ಸೋಲದೇವನಹಳ್ಳಿ ಪೊಲೀಸರ ಅತಿಥಿಯಾಗಿದ್ದಾರೆ.
ಆನ್‌ಲೈನ್‌ನಲ್ಲಿ ನೂರಾರು ಲ್ಯಾಪ್‌ಟಾಪ್‌ಗಳು ಸೇಲ್‌ಗೆ ಹಾಕಿದ್ದ ಹೋಲ್ ಸೇಲ್ ಉದ್ಯಮಿ ಬಳಿ ಎ1 ಆರೋಪಿ ಯಾಸೀನ್ ಒಮ್ಮೆ ವ್ಯವಹಾರ ಮಾತನಾಡಿಕೊಂಡು ಮತ್ತೆ ಬರ್ತೇನೆ ಅಂತ ಹೋಗಿದ್ದವನು, 3-4 ದಿನಗಳ ನಂತ್ರ ಬಂದು ಸಂಪೂರ್ಣ ಗೋದಾಮನ್ನೇ ದೋಚಿ ಹೋಗಿದ್ದಾನೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮಶೆಟ್ಟಿಹಳ್ಳಿ ನಿವಾಸಿ ಜುಲ್ಫಿಕಾರ್ ಎಂಬುವರ 100ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗಳನ್ನ ಕದ್ದಿದ್ದ ಆರೋಪಿಗಳನ್ನ ಪೊಲೀಸ್ರು ಬಂಧಿಸಿದ್ದಾರೆ.
ಈ ಆನ್‌ಲೈನ್ ಮಾರ್ಕೆಟಿಂಗ್ ಬಂದ ಮೇಲಂತೂ ಸೆಕೆಂಡ್ ಹ್ಯಾಂಡೆಡ್ ಸಾಮಾಗ್ರಿಗಳನ್ನ ಮಾರೋದು ಅತೀ ಸುಲಭ ಆಗೋಯ್ತು, ಮಾರೋದು ಎಷ್ಟು ಸುಲಭ ಆಯ್ತೋ ಅಷ್ಟೆ ಸುಲಭವಾಗಿ ಮಾರಾಟಗಾರರಿಂದ ಸಾಮಾಗ್ರಿಗಳು ನೇರ ಗ್ರಾಹಕರ ಕೈಗೆ ತಲುಪುತ್ತದೆ. ಇದನ್ನೆ ಬಂಡವಾಳ ಮಾಡ್ಕೊಂಡ ಈ ಆರೋಪಿ ಮೊದಲನೇ ಕೋವಿಡ್ ಸಂಧರ್ಭಸಲ್ಲಿ ಮಾಡ್ಕೊಂಡ ಸಾಲ ತೀರಿಸಲು ಆಗದೆ ಸುಲಭ ಮಾರ್ಗವಾಗಿ ಹಣ ಮಾಡಲು ಕಳ್ಳತನದ ಮಾರ್ಗ ಹಿಡಿದಿದ್ದಾನೆ. ಜುಲ್ಫಿಕಾರ್ ಎಂಬುವರ ಬಳಿ ಜೂನ್ 14 ರಂದು ವ್ಯವಹಾರ ಮಾಡಲು ಬಂದಿದ್ದ ಯಾಸಿನ್ ಷರೀಫ್ ಲ್ಯಾಪ್‌ಟಾಪ್‌ಗಳನ್ನೆಲ್ಲ ನೋಡ್ಕೊಂಡು ಹೋಗಿದ್ದ. ಮತ್ತೆ ಕಳ್ಳತನ ಮಾಡೋ ಪ್ಲಾನ್ ಮಾಡಿ ಜೂನ್ 17 ರಂದು ರಾತ್ರಿ ತನ್ನ ಮೂವರು ಸ್ನೇಹಿತರೊಡನೆ ಕಾರಿನಲ್ಲಿ ಬಂದಿದ್ದಾನೆ. ಅಲ್ಲೆ ಬೀದಿ ನಾಯಿ ಬೊಗಳುತ್ತಿದ್ರಿಂದ ನಾಯಿಗೆ ಮತ್ತು ಬರುವ ಬಿಸ್ಕೇಟ್ ತಿನಿಸಿ, ಅಕ್ಕಪಕ್ಕದ ಮನೆಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಗೋಡೌನ್‌ನಲ್ಲಿದ್ದ ಲ್ಯಾಪ್‌ಟಾಪ್ಗಳನ್ನ ಕದ್ದು ಪರಾರಿಯಾಗಿದ್ರು, ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಠಾಣಾ ಪೊಲೀಸ್ರು ಚೋರರನ್ನ ಬಂಧಿಸಿದ್ದಾರೆ.
ಇನ್ನೂ ಆರೋಪಿಗಳು ಕದ್ದ ಲ್ಯಾಪ್‌ಟಾಪ್‌ಗಳನ್ನ ಆನ್‌ಲೈನ್ ಮುಖಾಂತರ ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಆರೋಪಿಗಳನ್ನ ಬಂಧಿಸಿದ ಪೊಲೀಸರು 100ಕ್ಕೂ ಹೆಚ್ಚು ಲ್ಯಾಪ್‌ಟಾಪ್ ಕೃತ್ಯಕ್ಕೆ ಬಳಸಿದ್ದ ಕಾರ್ ಹಾಗೂ ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆದಿದ್ದಾರೆ.
PublicNext
06/07/2022 09:29 pm