ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ:ಗಾಂಜಾ ಪೆಡ್ಲರ್‌ಗೆ ಖಾಕಿ ಗುದ್ದು-ಪ್ರತ್ಯೇಕ 2 ಪ್ರಕರಣದ ಆರೋಪಿಗಳ ಬಂಧನ!

ನೆಲಮಂಗಲ: ಪ್ರತ್ಯೇಕ 2 ಗಾಂಜಾ ಪ್ರಕರಣದಡಿ ಸುಮಾರು 13 ಲಕ್ಷ ಮೌಲ್ಯದ 35 ಕೆ.ಜಿ 600 ಗ್ರಾಂನಷ್ಟು ಗಾಂಜಾ ಸಹಿತ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸ್ರು ಯಶಸ್ವಿಯಾಗಿದ್ದಾರೆ.

ಇನ್ನೂ ಬೆಂಗಳೂರು ಉತ್ತರ ತಾಲೂಕು ಹೆಸರುಘಟ್ಟ ನಿವಾಸಿ ನಾಗರಾಜು (23), ಬೆಂಗಳೂರಿನ ಟಿ.ಸಿ ಪಾಳ್ಯದ ನಿವಾಸಿ ಸೈಯದ್ ಇಮ್ರಾನ್ (38) ಮತ್ತು ಆಂಧ್ರಪ್ರದೇಶದ ಕಡಪ ಮೂಲದ ನಿವಾಸಿ ದಿನೇಶ್ 25 ಬಂಧಿತ ಆರೋಪಿಗಳು..

ಜೂ.22ರಂದು ರಾತ್ರಿ 8ಗಂಟೆ ವೇಳೆಯಲ್ಲಿ ತಾಲ್ಲೂಕಿನ ಇಸ್ಲಾಂಪುರದ ಸಾಯಿರಾಂ ಬಡಾವಣೆ ಬಳಿ ವ್ಯಕ್ತಿಯೊಬ್ಬ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಪಡೆದ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ ಸ್ಪೆಕ್ಟರ್ ಎ.ರಾಜೀವ್ ನೇತೃತ್ವದ ಪೊಲೀಸರ ತಂಡ ಗಾಂಜಾ ಮಾರಾಟ ಮಾಡುತ್ತಿದ್ದ ಬೆಂಗಳೂರು ಉತ್ತರ ತಾಲೂಕು ಹೆಸರುಘಟ್ಟ ನಿವಾಸಿ ನಾಗರಾಜು ಎಂಬಾತನ್ನು ಬಂಧಿಸಿದ್ದು ಬಂಧಿತರಿಂದ 4ಲಕ್ಷ ಮೌಲ್ಯ 5ಕೆಜಿ 600 ಗ್ರಾಂ ಗಾಂಜಾ ಹಾಗೂ ದ್ವಿಚಕ್ರವಾಹನವನ್ನು ವಶಪಡಿಸಿಕೊಂಡಿಕೊಂಡಿದ್ದಾರೆ.

ಆಂಧ್ರಪ್ರದೇಶದಿಂದ ಗಾಂಜಾ ರಫ್ತು ಮಾಡಿಸಿಕೊಂಡು ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಮತ್ತು ಲಾರಿ ಚಾಲಕರಿಗೆ ಸಣ್ಣ ಪ್ಯಾಕೇಟ್ ಮಾಡಿ 200ರೂ ರಿಂದ 300 ರೂಪಾಯಿಗೆ ಮಾರಾಟ ಮಾಡುತ್ತಿದ್ದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಅಲ್ಲದೆ ಮತ್ತೊಂದು ಪ್ರಕರಣ ಜುಲೈ.5ರಂದು ತಾಲೂಕಿನ ಜಾಸ್ ಟೋಲ್ ಬಳಿಯ ರಾಶಿಗೇಟ್ ವೇ ಬಡಾವಣೆಯಲ್ಲಿ ಇಬ್ಬರು ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದು ಸ್ಥಳೀಯರು ನೀಡಿ ಮಾಹಿತಿ ಅಧರಿಸಿ ಸ್ಥಳಕ್ಕೆ ಬೇಟಿ ನೀಡಿದ್ದ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ ಸ್ಪೆಕ್ಟರ್ ರಾಜೀವ್ ನೇತೃತ್ವದ ಪೊಲೀಸರ ತಂಡ ಗಾಂಜಾ ಮಾರಾಟ ಮಾಡುತ್ತಿದ್ದ ಬೆಂಗಳೂರಿನ ಟಿ.ಸಿ ಪಾಳ್ಯದ ಸೈಯದ್ ಇಮ್ರಾನ್ ಮತ್ತು ಆಂಧ್ರಪ್ರದೇಶದ ಕಡಪ ಮೂಲದ ದಿನೇಶ್ ಎಂಬಾತರನ್ನು ಬಂಧಿಸಿದ್ದಾರೆ. 9ಲಕ್ಷ ಮೌಲ್ಯದ 30ಕೆ.ಜಿ. ಗಾಂಜಾ ಹಾಗೂ ಒಂದು ದ್ವಿಚಕ್ರವಾಹವನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಸದ್ಯ ಜೈಲಿಗಟ್ಟಿದ್ದಾರೆ.

Edited By :
Kshetra Samachara

Kshetra Samachara

06/07/2022 07:12 pm

Cinque Terre

1.62 K

Cinque Terre

0

ಸಂಬಂಧಿತ ಸುದ್ದಿ