ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿ ಮಂತ್ರಿ ಗ್ರೂಪ್ ಸಿಎಂಡಿ ಸುಶೀಲ್ ಪಾಂಡುರಂಗ ಬಂಧಿಸಿ 10 ದಿನಗಳ ಕಾಲ ಕಸ್ಟಡಿ ಪಡೆದುಕೊಂಡಿರುವ ಜಾರಿ ನಿರ್ದೇಶಾನಾಲಯ, ಇಂದು ಸುಶೀಲ್ ಮನೆ ಕಚೇರಿ ಸೇರಿದಂತೆ 10 ಕಡೆಗಳಲ್ಲಿ ಏಕಕಲಾಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸುಶೀಲ್ ಪಾಂಡುರಂಗನನ್ನು ಬಂಧನ ಬಳಿಕ ನ್ಯಾಯಾಲಯದಿಂದ ಸರ್ಚ್ ವಾರೆಂಟ್‌ಗೆ ಅನುಮತಿ ಪಡೆದುಕೊಂಡು ಇಂದು ಬೆಳಗ್ಗೆ
ಸುಶೀಲ್ ಗೆ ಸಂಬಂಧಿಸಿದ ವಿಠಲ್ ಮಲ್ಯ ರಸ್ತೆಯಲ್ಲಿರುವ ಕಚೇರಿ ಸೇರಿದಂತೆ 10 ಕಡೆ ಇಡಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಸುಶೀಲ್ ಮೇಲಿರುವ ಆರೋಪಗಳ ಸಂಬಂಧ ಸಾಕ್ಷಿ ಕಲೆ ಹಾಕುವ ನಿಟ್ಟಿನಲ್ಲಿ ದಾಳಿ ನಡೆಸಲಾಗಿದೆ.
ನಿವೇಶನ, ಫ್ಲ್ಯಾಟ್ ಅಥವಾ ಕೋಟ್ಯಂತರ ರೂಪಾಯಿ ಹಣದ ವಹಿವಾಟಿನ ಕುರಿತ ದಾಖಲಾತಿಗಳ ಸುಳಿವಿಗಾಗಿ ಪರಿಶೀಲನೆ ನಡೆಸಲಾಗುತ್ತಿದೆ.
PublicNext
27/06/2022 01:09 pm