ಬೆಂಗಳೂರು: ನಗರದಲ್ಲಿ ಅಪಾರ್ಟ್‌ಮೆಂಟ್ ಮೇಲೆ ಡ್ರಗ್ ಪಾರ್ಟಿ ಶಂಕೆ ಹಿನ್ನೆಲೆ ಹೆಣ್ಣೂರು ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಹಲವು ಯುವಕ, ಯುವತಿಯರನ್ನ ವಶಕ್ಕೆ ಪಡೆದ ವಿಚಾರಣೆ ನಡೆಸ್ತಿದ್ದಾರೆ. ಹೆಣ್ಣೂರಿನ ಎಲೆಗೆಂಟ್ ಆಸ್ಟರ್ ಅಪಾರ್ಟ್ ಮೆಂಟ್ ಮೇಲೆ ತಡರಾತ್ರಿ ದಾಳಿ ನಡೆಸಿದ್ದಾರೆ.
ಸ್ಥಳದಲ್ಲೇ ಪೊಲೀಸರು ಮುಂದುವರೆದು ಪರಿಶೀಲನೆ ನಡೆಸ್ತಿದ್ದಾರೆ.ಇನ್ನೂ ವಶಕ್ಕೆ ಪಡೆದ ಯುವಕ,ಯುವತಿಯರ ಮೆಡಿಕಲ್ ಚೆಕ್ ಅಪ್ ಮಾಡಿಸಿದ್ದು ರಿಪೋರ್ಟ್ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ರು ತಿಳಿಸಿದ್ದಾರೆ.
ಬೇರೆ ರಾಜ್ಯದವರು ಸೇರಿದಂತೆ ವಿದೇಶಿ ಯುವಕ,ಯುವತಿಯರನ್ನ ವಶಕ್ಕೆ ಪಡೆದಿದ್ದು ಹೆಣ್ಣೂರು ಪೊಲೀಸ್ರು ವಿಚಾರಣೆ ನಡೆಸ್ತಿದ್ದಾರೆ.
Kshetra Samachara
18/06/2022 02:31 pm