ಯಲಹಂಕ:ಯಾರು ಇಲ್ಲದ ಖಾಲಿ ಮನೆಗಳೆ ಈ ಖದೀಮರ ಟಾರ್ಗೆಟ್. ಬೆಂಗಳೂರಿನ ಸುತ್ತಮುತ್ತ ಇವರ ವಿರುದ್ಧ ಅನೇಕ ಪೊಲೀಸ್ ಠಾಣೆಗಳಲ್ಲಿ ಸುಮಾರು 21 ಕೇಸ್‌ಗಳು ದಾಖಲಾಗಿವೆ. ಸಂಪಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಅಗ್ರಹಾರ ಲೇಔಟ್ ಪ್ರವೀಣ್ ರವರ ದೂರಿನನ್ವಯ ಪೊಲೀಸರು ಈ ಇಬ್ಬರು ಕಧೀಮರನ್ನ ಬಂದಿಸಿದ್ದಾರೆ. ಅಮೃತಹಳ್ಳಿಯ ಇಸೈರಾಜ್ & ಆನಂದ್ ಕುಮಾರ್ ಬಂಧಿತ ಆರೋಪಿಗಳು.
ಪ್ರವೀಣ್ ಅಗ್ರಹಾರ ಲೇಔಟ್ ಮನೆಯಲ್ಲಿ ವಾಸವಿದ್ದು, 20 ದಿನಗಳಕಾಲ ದೂರದ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಇಬ್ಬರು ಕದೀಮರು ರಾತ್ರಿ ವೇಳೆ ಮನೆಗೆ ಕನ್ನ ಹಾಕಿ 355ಗ್ರಾಂ. ಚಿನ್ನಾಭರಣ, 100 ಗ್ರಾಂ.ಬೆಳ್ಳಿ ಅಭರಣ, 26000 ನಗರದು ಸೇರಿದಂತೆ 18ಲಕ್ಷ ಬೆಲೆಯ ವಸ್ತುಗಳನ್ನು ಕಳವು ಮಾಡಿದ್ದರು.
ಈಗ ಸಂಪಿಗೇಹಳ್ಳಿ ಪೊಲೀಸರ ಕಾರ್ಯಾಚರಣೆಯಿಂದ ಪರಪ್ಪನ ಅಗ್ರಹಾರದಲ್ಲಿ ಇಬ್ಬರು ಖದೀಮರು ಜೈಲೂಟ ಉಣ್ಣುತ್ತಿದ್ದಾರೆ.
ಇವರ ವಿರುದ್ಧ ಬೆಂಗಳೂರಿನಾದ್ಯಂತ 21ಕ್ಕು ಹೆಚ್ಚು ಪ್ರಕರಣ ದಾಖಲಾಗಿವೆ.
Kshetra Samachara
18/06/2022 07:47 am