ಬೆಂಗಳೂರು: ರಾಬರಿಗೆ ಟೂಲ್ ಸಮೇತ ರೆಡಿಯಾಗಿದ್ದ ರೌಡಿ ಶೀಟರ್ ರಿಯಾಜ್ ಆ್ಯಂಡ್ ಟೀಂ ನ ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ದರೋಡೆಗೆ ಸಂಚು ರೂಪಿಸಿದ ನಾಲ್ವರು ಆರೋಪಿಗಳು ಸಿಸಿಬಿ ಬಲೆಗೆ ಬಿದ್ದಿದ್ದು, ಬಂಧಿತರನ್ನ ರಿಯಾಜ್, ನದೀಮ್, ಇಮ್ರಾನ್, ಅಶ್ರಿಪ್ ಎಂದು ಗುರುತಿಸಲಾಗಿದೆ.
ಗೊಟ್ಟೆಗೆರೆ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಮಾರಕಾಸ್ತ್ರ ಹಿಡಿದು ದರೋಡೆಗೆ ಮುಂದಾಗಿದ್ದ ಆರೋಪಿಗಳ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸ್ರು ಆರೋಪಿಗಳನ್ನು ಬಂಧಿಸಿದ್ದಾರೆ.
ಸದ್ಯ ಆರೋಪಿಗಳಿಂದ ಎರಡುಲಾಂಗ್ ಹಾಗೂ ಕಬ್ಬಿಣ ಪೈಪ್ ಗಳನ್ನ ಸೀಜ್ ಮಾಡಿದ್ದಾರೆ.
Kshetra Samachara
13/06/2022 01:51 pm