ನೆಲಮಂಗಲ: ಆಕೆ ಸುಂದರ ಕನಸುಗಳೊತ್ತು ಆತನೊಂದಿಗೆ ಪ್ರೀತಿಸಿ ಮದುವೆಯಾಗಿದ್ಲು, ಆ ಚೆಲುವೆ, ನವ ಜೀವನ ಪ್ರಾರಂಭವಾಗಿ ಕೇವಲ 8 ತಿಂಗಳಾಗಿತ್ತಷ್ಟೇ, ಮದುವೆ ಆದಾಗಿನಿಂದ ಆಕೆಗೆ ಪತಿಯದ್ದೇ ಕಿರುಕುಳ, ಆತನ ಕಿರುಕುಳಕ್ಕೆ ಮನನೊಂದ ಆಕೆ ನೇಣಿಗೆ ಕೊರಳೊಡ್ಡಿದ್ದಾಳೆ.
ಹೀಗೆ ಶವಾಗಾರದಲ್ಲಿರೋ ನವವಿವಾಹಿತೆ ಮೃತದೇಹ, ಮೃತದೇಹದ ಮುಂದೆ ತಾಯಿಯ ಗೋಳಾಟ, ಮಗಳ ಸಾವಿನ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಎದುರು ಕುಟುಂಬಸ್ಥರ ಅಲೆದಾಟ. ಹೌದು ಈ ದೃಶಗಳಿಗೆ ಸಾಕ್ಷಿಯಾಗಿದ್ದು ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಹಳ್ಳಿ ಗ್ರಾಮದ ಮನೆಯೊಂದರಲ್ಲಿ ನಡೆದ ಒಂದು ಆತ್ನಹತ್ಯೆ ಪ್ರಕರಣ. ಈ ಫೋಟೋದಲ್ಲಿ ಮುದ್ದಾಗಿ ಕಾಣ್ತಿರೋ ಈಕೆ ಹೆಸ್ರು ವಿನುತಾ. ಇನ್ನೂ 20 ವರ್ಷ ದೇವನಹಳ್ಳಿ ತಾಲ್ಲೂಕು ಸುಣ್ಣಘಟ್ಟ ಮೂಲದ ವಿನುತಾ ಕಳೆದೆಂಟು ತಿಂಗಳ ಹಿಂದೆ ಬೆಟ್ಟಹಳ್ಳಿಯ ಹರೀಶ್ ಎಂಬುವನೊಡನೆ ಪ್ರೀತಿಸಿ ಮದುವೆಯಾದ್ಲು, ಮದುವೆಯಾಗಿ ವರ್ಷ ಕಳೆಯೋದ್ರೊಳಗೆ ನೇಣಿಗೆ ಕೊರಳೊಡ್ಡಿ ಇಹಲೋಕ ತ್ಯಜಿಸಿದ್ದಾಳೆ.
ಹೌದು ಮೃತ ವಿನುತಾ, ಹರೀಶ್‌ನನ್ನು ಮದುವೆಯಾದ ದಿನದಿಂದ ಇಂದಿನವರೆಗೂ ಒಂದು ದಿನವೂ ನೆಮ್ಮದಿಯಿಂದ ಜೀವನ ನಡೆಸಿಲ್ಲವಂತೆ, ಹಣಕ್ಕಾಗಿ ಆರೋಪಿ ಹರೀಶ್ ಹಾಗೂ ಆತನ ತಾಯಿ ನಾಗರತ್ನ ಸದಾ ಪೀಡಿಸುತ್ತಿದ್ದಳಂತೆ. ಹಾಗಾಗಿ ವಿನುತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆದ್ರೆ ಮೃತಳ ಪೋಷಕರು ಮಾತ್ರ ನನ್ನ ಮಗಳನ್ನ ವರದಕ್ಷಿಣೆಗಾಗಿ ಮಾನಸಿಕವಾಗಿ ಕಿರುಕುಳ ನೀಡಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಮೃತಳ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಲೂ ಬಂದ್ರೆ ಪೊಲೀಸ್ರು ಘಟನೆ ನಡೆದು ಒಂದು ರಾತ್ರಿ ಕಳೆದ್ರು ಪ್ರಭಾವಿಗಳ ಒತ್ತಡಕ್ಕೆ ಮಣಿದು ದೂರು ದಾಖಲಿಸಿಕೊಂಡಿಲ್ಲ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ. ಅಲ್ಲದೆ ಮರಣೋತ್ತರ ಪರೀಕ್ಷೆಗೆ ತಹಶೀಲ್ದಾರ್ ಭೇಟಿ ನೀಡಿದ್ದ ವೇಳೆ ತಹಶೀಲ್ದಾರ್ ಸಮ್ಮುಖದಲ್ಲೇ ಎರಡು ಕುಟುಂಬದ ಸದಸ್ಯರ ನಡುವೆ ಮಾತಿಗೆ ಮಾತು ಬೆಳೆಸಿ ಕೈ ಕೈ ಮಿಲಾಯಿಸುವ ಹಂತಕ್ಕೆ ಮುಂದುವರೆದಿತ್ತು.
ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತಿ ಹರೀಶ್‌ನನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
PublicNext
11/06/2022 09:04 pm