ಆನೇಕಲ್:ಹುಬ್ಬಳ್ಳಿ ಮೂಲದ ಯುವಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೂರ್ಯನಗರ ಎರಡನೆಯ ಹಂತದ ಸಿ ಸೆಕ್ಟರ್ ಬಳಿ ನಡೆದಿದೆ.
ಹುಬ್ಬಳ್ಳಿ ಮೂಲದ ಶ್ರೀಧರ್ ನೇಣಿಗೆ ಶರಣಾಗಿರುವ ಯುವಕ. ಕಳೆದ ನಾಲ್ಕು ವರ್ಷಗಳ ಹಿಂದೆ ಹುಬ್ಬಳ್ಳಿಯಿಂದ ಬಂದು ಸೂರ್ಯನಗರ ಎರಡನೇ ಹಂತದಲ್ಲಿ ರಘು ಎಂಬ ಸ್ನೇಹಿತನ ಜೊತೆ ಶ್ರೀಧರ್ ವಾಸವಾಗಿದ್ದರು. ಇನ್ನು ಶ್ರೀಧರ್ ವಾಟರ್ ಸಪ್ಲೇ ಮಾಡುವರು ಜೊತೆ ಕೆಲಸ ಮಾಡಿ ಜೀವನಸಾಗುಸುತಿದ್ದ. ಇಂದು ಮಧ್ಯಾಹ್ನ ಕೆಲಸ ನಿಮಿತ್ತ ಸ್ನೇಹಿತ ರಘು ಬೆಂಗಳೂರಿಗೆ ಹೋಗಿದ್ರಂತೆ. ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ವೇಳೆ ಶ್ರೀಧರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ನೇಹಿತ ರಘು ಕೆಲಸ ಮುಗಿಸಿ ಮನಗೆ ಬಂದಾಗ ಶ್ರೀಧರ್ ನಂಬರಿಗೆ ಸಾಕಷ್ಟು ಬಾರಿ ಕರೆ ಮಾಡಿದ್ದು ಕರೆ ಸ್ವೀಕರಿಸಿದ ಕಾರಣ ಜತಗೆ ಮನೆಯಲ್ಲಿ ಬಾಗಿಲು ಬೀಗ ತೆಗಯದ ಕಾರಣ ಅನುಮಾನಗೊಂಡು ಕಿಟಕಿ ಒಡೆದು ನೋಡಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಸೂರ್ಯ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
09/06/2022 09:02 pm