ಬೆಂಗಳೂರು: ರಾಜಧಾನಿಯಲ್ಲಿ ಕೆಲ ದಿನಗಳ ಹಿಂದೆ ಯುವತಿ ಮೇಲೆ ನಡೆದ ಆ್ಯಸಿಡ್ ದಾಳಿ ಮಾಸುವ ಮುನ್ನವೇ ಮತ್ತೊಂದು ಆ್ಯಸಿಡ್ ಆಟ್ಯಾಕ್ ಆಗಿದೆ. ಸ್ನೇಹಿತನ ಮೇಲೆಯೇ ಆ್ಯಸಿಡ್ ದಾಳಿ ನಡೆಸಿದ ಆರೋಪದಡಿ ಆರೋಪಿ ಪೊಲೀಸರ ಕೈಗೆ ಲಾಕ್ ಆಗಿದ್ದಾನೆ.
ಪಶ್ಚಿಮ ಬಂಗಾಳ ಮೂಲದ ಜಂಟು ಅದಕ್ ಬಂಧಿತ ಆರೋಪಿಯಾಗಿದ್ದಾನೆ. ಆ್ಯಸಿಡ್ ದಾಳಿಗೊಳಗಾದ ಮಂತು ಸಂತ್ರ ಎಂಬಾತನಿಗೆ ಶೇ. 30 ರಷ್ಟು ಗಾಯಗೊಂಡಿದ್ದು ಈ ಸಂಬಂಧ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಗೊಳಗಾದ ವ್ಯಕ್ತಿಯು ಹಾಗೂ ಆರೋಪಿಯು ಇಬ್ಬರು ಸ್ನೇಹಿತರಾಗಿದ್ದರು. ಇಬ್ಬರು ಸಹ ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ.
ಇಬ್ಬರು ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಕಳೆದ ಭಾನುವಾರ ರಾತ್ರಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸ್ನೇಹಿತರು ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡಿಕೊಂಡಿದ್ದರು. ಇದರಿಂದ ಅಸಮಾಧಾನಗೊಂಡ ಜಂಟು ಆದಕ್ ಈ ವೇಳೆ ಡೈಲೂಟೇಡ್ ಸೆಲ್ಫೂರಿಕ್ ಆ್ಯಸಿಡ್ ನ್ನ ಸ್ನೇಹಿತನ ಮುಖ ಹಾಗೂ ಎದೆಗೆ ಎರಚಿದ್ದಾನೆ. ಶೇಕಡಾ 30% ರಷ್ಟು ಗಾಯವಾಗಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
Kshetra Samachara
31/05/2022 03:29 pm