ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತೆಂಗಿನ ಮರ ಏರಿ 18 ಲಕ್ಷ ರೂ. ಚಿನ್ನಾಭರಣ ಕದ್ದ ಕಳ್ಳ

ಬೆಂಗಳೂರು: ಬಸವನಗುಡಿ ಬಳಿ ಇರುವ ದಿವ್ಯಾ ರಿಜೆನ್ಸಿ ಎಂಬ ಅಪಾರ್ಟ್ಮೆಂಟ್ ಪ್ಲಾಟ್‌ನಲ್ಲಿ ಚಿನ್ನಾಭರಣ ದೋಚಿದ್ದ ಕಳ್ಳನನ್ನು ಬಸವನಗುಡಿ ಪೊಲೀಸರು ದೂರು ಬಂದ ಒಂದೇ ದಿನದಲ್ಲಿ ಬಂಧಿಸಿದ್ದಾರೆ.

ಮಂಗಳೂರಿನ ಕಂಕನಾಡಿ ನಿವಾಸಿ ಮೊಹಮ್ಮದ್ ಸಾಧಿಕ್ ಬಂಧಿತ ಆರೋಪಿಯಾಗಿದ್ದು, ಆತನಿಂದ 18 ಲಕ್ಷ ರೂ. ಮೌಲ್ಯದ 331 ಗ್ರಾಂ ಚಿನ್ನಾಭರಣ, 2 ಕೆ.ಜಿ 600 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ‌. ಡಾಗ್ ಸ್ಕ್ವಾಡ್ ಹಾಗೂ ಟೆಕ್ನಿಕಲ್ ಎವಿಡನ್ಸ್‌ ಮೂಲಕ ಪೊಲೀಸರು ಕಳ್ಳನ ಮನೆಗೆ ನೇರವಾಗಿ ತಲುಪಿ ಬಂಧಿಸಿದ್ದಾರೆ.

ಮೊಹಮ್ಮದ್ ಸಾಧಿಕ್‌ಗೆ ತಂದೆ ತಾಯಿ ಇರಲಿಲ್ಲ. ಓದು ಬರಹವಂತೂ ಮೊದಲೇ ಇಲ್ಲ. ಪೋಷಕರಿಲ್ಲದೆ ದಾರಿ ತಪ್ಪಿದ ಮಗನಾಗಿ ಬೆಳೆದವನು ಶೋಕಿಗೆ ಬಿದ್ದುಬಿಟ್ಟಿದ್ದ. ಏನೇ ಮಾಡಿದ್ರೂ ತನ್ನಿಚ್ಛೆಯನ್ನ ಪೂರೈಸಿಕೊಳ್ಳುವಷ್ಟು ದುಡ್ಡು ದಕ್ಕುತ್ತಿರಲಿಲ್ಲ‌. ಕೈ ತುಂಬ ದುಡ್ಡಿದ್ದು ಮಜಾ ಮಾಡಬೇಕು ಎಂದುಕೊಂಡವನಿಗೆ ದಾರಿಯಾಗಿದ್ದು ಕಳ್ಳತನ. ಹಣ ಖಾಲಿಯಾದಾಗ ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ. ಕಾಟನ್ ಪೇಟೆಯಲ್ಲಿ ಲಾಡ್ಜ್ ಮಾಡಿಕೊಂಡು ರಾತ್ರಿಯಾದ್ರೆ ಕಳ್ಳತನಕ್ಕೆ ಹೊರ ಬೀಳುತ್ತಿದ್ದ. ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಜೈಲುಗೆ ಹೋಗಿ ಬಂದವನಿಗೆ ಕಳ್ಳತನ ಅಭ್ಯಾಸವಾಗಿ ಹೋಗಿದೆ. ಇನ್ನು ಇದೇ ರೀತಿ ನಗರಕ್ಕೆ ಬಂದವನು ನೇರವಾಗಿ ಬಸವನಗುಡಿಗೆ ಬಂದಿದ್ದ. ದಿವ್ಯಾ ರಿಜೆನ್ಡ್ ಎಂಬ ಅಪಾರ್ಟ್ಮೆಂಟ್‌ಗೆ ಕಣ್ಣು ಹಾಕಿದ್ದ.

ತೆಂಗಿನದ ಸಹಾಯದಿಂದ ಅಪಾರ್ಟ್‌ಮೆಂಟ್‌ ಏರಿದ್ದ ಮೊಹಮ್ಮದ್ ಮನೆಯೊಂದರ ಬಾಗಿಲಿಗೆ ತಲುಪಿದ್ದ. ನಂತರ ಕಿಟಿಕಿ ಮೂಲಕ ಒಳಗೆ ಕೈಹಾಕಿ ಡೋರ್ ಲಾಕ್ ತೆಗೆದು ಒಳ ನುಗ್ಗಿದ್ದ. ದುರಂತ ಅಂದ್ರೆ ಕಳ್ಳ ಮನೆಯಲ್ಲಿ ಯಾರು ಇಲ್ಲ ಎಂದು ಕಳ್ಳತನ ಮಾಡಿದ್ದ. ಒಳಗೆ ದಂಪತಿ ಮಲಗಿರುವ ವಿಚಾರವೂ ಗೊತ್ತಿರಲಿಲ್ಲ. ಸಿಹಿ ನಿದ್ದೆಯಲ್ಲಿದ್ದ ದಂಪತಿಗೂ ಕಳ್ಳ ಬಂದಿರೋ ಪರಿವೇ ಇಲ್ಲದೆ ಮಲಗಿದ್ರು. ಬೆಳಗೆದ್ದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವ ವಿಚಾರ ಗೊತ್ತಾಗಿತ್ತು.

Edited By : Nagesh Gaonkar
PublicNext

PublicNext

30/05/2022 07:30 pm

Cinque Terre

28.57 K

Cinque Terre

0

ಸಂಬಂಧಿತ ಸುದ್ದಿ