ಬೆಂಗಳೂರು: ಒಂದು ತಿಂಗಳಿನಿಂದಲೂ ಆಸ್ಪತ್ರೆ ಬೆಡ್ ನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಆಸಿಡ್ ಸಂತ್ರಸ್ತೆ ಯುವತಿಯ ಆರೋಗ್ಯ ಸ್ಥಿತಿ ನಿನ್ನೆ ಬೆಳಗ್ಗೆಯಿಂದ ಏರುಪೇರಾಗಿದ್ದು, ಆ ಕೂಡಲೇ ಐಸಿಯುಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆಯಿಂದ ಯುವತಿಗೆ 4ನೇ ಶಸ್ತ್ರಚಿಕಿತ್ಸೆಯಾಗಿದ್ದು, ಸಂಜೆ ಯಶಸ್ವಿಯಾಗಿ ಮುಗಿದಿದೆ. ಆದರೂ ಯುವತಿಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ವಿಶೇಷ ನಿಗಾ ವಹಿಸಿ, ಚಿಕಿತ್ಸೆ ನೀಡುತ್ತಿದ್ದಾರೆ.
ಈ ಸಂದರ್ಭ ʼಪಬ್ಲಿಕ್ ನೆಕ್ಸ್ಟ್ʼ ಮುಂದೆ ಯುವತಿಯ ದೊಡ್ಡಪ್ಪ ಶಂಕರ್ ಅಳಲು ತೋಡಿಕೊಂಡರು. 2-3 ದಿನಗಳಿಂದಲೂ ನಮಗೆ ನಿತ್ಯ ನರಕವಾಗಿತ್ತು. ನಮ್ಮ ಮಗಳ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ನಮಗೆ ಯಾವುದೇ ರೀತಿಯ ಮಾಹಿತಿ ಸಿಗುತ್ತಿರಲಿಲ್ಲ.
ಆದರೆ, ಇಂದು ಮುಂಜಾವ ಆಪರೇಷನ್ ಗೆ ಮಗಳನ್ನು ವೈದ್ಯರು ಕರೆದುಕೊಂಡು ಹೋಗಿದ್ದರು. ಸಂಜೆ ವೇಳೆ ಆಪರೇಷನ್ ಮುಗಿದು, ನಮ್ಮ ಮಗಳು ನಮ್ಮನ್ನು ಮಾತನಾಡಿಸಿದ್ದಾಳೆ. ಆದರೆ, ಇನ್ನೂ ಐಸಿಯುನಲ್ಲೇ ಚಿಕಿತ್ಸೆ ನೀಡುತ್ತೇವೆ ಎಂದು ವೈದ್ಯರು ನಮಗೆ ತಿಳಿಸಿದ್ದಾರೆ.
- ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
23/05/2022 08:32 pm