ಬೆಂಗಳೂರು : ಆ ಮಹಾನ್ ಖದೀಮ ಕೆಲಸ ಮಾಡುತ್ತಿದ್ದದ್ದು ರಿಲಯನ್ಸ್ ಡಿಜಿಟಲ್ ಸ್ಟೋರ್‌ನಲ್ಲಿ. ಅವನು ರಿಲಯನ್ಸ್ ಕೆಲಸದಲ್ಲೇ ಮಾಡ್ಕೊಂಡೆ ಇದ್ದಿದ್ರೆ ಇವತ್ತು ಆತ ಸುದ್ದಿಯಾಗುತ್ತಿರಲಿಲ್ಲ ಏನೋ ಗೊತ್ತಿಲ್ಲ. ದುಡ್ಡು ಮಾಡೋಕೆ ಐನಾತಿ ಪ್ಲಾನ್ ಮಾಡಿ ಸುಮಾರು 50ಕ್ಕೂ ಹೆಚ್ಚು ಅಮಾಯಕ ಮಹಿಳೆ ಹಾಗೂ ಯುವಕರಿಗೆ ವಂಚನೆ ಮಾಡಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಮೋಸ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಇವನು ಒಮ್ಮೆ ಸರಿಯಾಗಿ ನೋಡ್ಕೋಬಿಡಿ, ಈ ಫೋಟೋದಲ್ಲಿ ಕಾಣುತ್ತಿದ್ದಾನಲ್ಲ ಇವನ ಹೆಸರು ಬಾಬು ಅವಾಸ್ ಅಂತ ಬಾಗೇಪಲ್ಲಿ ಮೂಲದ ಈತ, ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ. ರಿಲಯನ್ಸ್ ಡಿಜಿಟಲ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ. ಇನ್ನು ಬಾಬು ಅವಾಸ್ ಆನೇಕಲ್ ಮೂಲದ 8 ಜನಕ್ಕೆ ಝೀರೋ ಇಂಟರೆಸ್ಟ್ ಲೋನ್ ಕೊಡಿಸುವುದಾಗಿ ನಂಬಿಸಿ ಮಹಿಳೆಯರಿಗೆ ಸುಮಾರು 10 ಲಕ್ಷ ರೂಪಾಯಿ ಹಣ ಪಂಗನಾಮ ಹಾಕಿದ್ದಾನೆ.
ಇನ್ನು ಹಣ ಕಳೆದುಕೊಂಡವರು ಬಾಬು ಮನೆ ಹತ್ತಿರ ಹೋಗಿ ಗಲಾಟೆ ಮಾಡಿದ್ದಾರಂತೆ. ಆದರೆ ಮನೆಯವರು ಇವತ್ತು ಕೊಡ್ತೀನಿ ನಾಳೆ ಕೊಡ್ತೀನಿ ಅಂತ ಆಟ ಆಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ಕುಟುಂಬಸ್ಥರು ಕೂಡ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಿದ್ದಾರೆ. ಹೀಗಾಗಿ ನಮಗೆ ನ್ಯಾಯ ಕೊಡಿಸಿ ಎಂದು ಸಂತ್ರಸ್ತರು ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಅನ್ಯಾಯಕ್ಕೊಳಗಾದ ವ್ಯಕ್ತಿಗಳಿಗೆ ನ್ಯಾಯ ಸಿಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
-ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
16/05/2022 09:34 pm