ಬೆಂಗಳೂರು: ಪಿಎಸ್‌ಐ ಅಕ್ರಮದ ಜಾಡು ಬಗೆದಷ್ಟು ಬಯಲಾಗುತ್ತಿದೆ. ಇಡೀ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವ ಕೆಲಸ ಮಾಡಿದ್ದ ರೆಡ್ ಸ್ಯಾಂಡಲ್ ಸ್ಮಗ್ಲಿಂಗ್ ಕೇಸ್‌ನ ಪ್ರಮುಖ ಆರೋಪಿ ಕೂಡ ಪಿಎಸ್‌ಐ ನೇಮಕಾತಿ ಅಕ್ರಮ ಮಾಡಿರೋದು ಬೆಳಕಿಗೆ ಬಂದಿದೆ.
ರೆಡ್ ಸ್ಯಾಂಡಲ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಆರೋಪಿಯಾಗಿದ್ದ ಕಾನ್ಸ್‌ಟೇಬಲ್ ಮಮತೇಶ್ ಗೌಡ ಸೇರಿ ಮೂವರು ಕರ್ತವ್ಯ ನಿರತ ಕಾನ್ಸ್‌ಟೇಬಲ್‌ಗಳು ಅರೆಸ್ಟ್ ಆಗಿದ್ದಾರೆ. ಈ ಹಿಂದೆ ಹೊಸಕೋಟೆಯಲ್ಲಿ ರೆಡ್ ಸ್ಯಾಂಡಲ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಮಮತೇಶ್ ಗೌಡ ಭಾಗಿಯಗಿದ್ದ. ಈ ಕೇಸ್‌ನ ಫೈಲ್ ಕೂಡ ಸಿಐಡಿ ಅಧಿಕಾರಿಗಳು ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
PublicNext
02/05/2022 09:27 am